Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕೊಡೆ ಮುರುಗ` ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಯೋಗಿ
Posted date: 31 Tue, Dec 2019 06:38:30 PM

 ಕೆ.ಆರ್.ಕೆ  ಪ್ರೊಡಕ್ಷನ್ಸ್ ಲಾಂಛನದಲ್ಲಿ  ಕೆ.ರವಿಕುಮಾರ್ ಹಾಗೂ ಅಶೋಕ್  ಶಿರಾಲಿ ಅವರು ನಿರ್ಮಿಸುತ್ತಿರುವ `ಕೊಡೆ ಮುರುಗ`  ಚಿತ್ರದ ಹಾಡಿಗೆ  ಲೂಸ್  ಮಾದ ಯೋಗಿ  ಹೆಜ್ಜೆ  ಹಾಕಿದ್ದಾರೆ. ಸುಬ್ರಮಣ್ಯ ಪ್ರಸಾದ್ ಅವರು ಬರೆದಿರುವ  `ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ` ಎಂಬ ಹಾಡಿನಲ್ಲಿ ಯೋಗಿ ಅಭಿನಯಿಸಿದ್ದಾರೆ. ಲೂಸ್ ಮಾದ ಯೋಗಿ ಹಾಗೂ ಮುನಿಕೃಷ್ಣ ನಟಿಸಿರುವ ಈ ಹಾಡಿಗೆ ಸ್ಟಾರ್ ಗಿರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೈಲಾಶ್ ಖೇರ್ ಈ ಹಾಡನ್ನು ಹಾಡಿದ್ದಾರೆ.

ಸುಬ್ರಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣವಿದೆ. ತ್ಯಾಗರಾಜ್ ಸಂಗೀತ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ, ಭೂಷಣ್, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ, ಸ್ವಾತಿ ಗುರುದತ್, ಅರವಿಂದ ರಾವ್, ಅಸೋಕ್ ಶರ್ಮ, ರಾಕ್‌ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕೊಡೆ ಮುರುಗ` ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಯೋಗಿ - Chitratara.com
Copyright 2009 chitratara.com Reproduction is forbidden unless authorized. All rights reserved.