Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಗರ` ಈ ವಾರ ತೆರೆಗೆ
Posted date: 30 Tue, Apr 2019 10:40:11 AM

25ಫ಼್ರೇಂ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಗರ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾಶಂಕರ್ ಬಾಬು ಸಂಕಲನ, ದಿನೇಶ್ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರೆಹಮಾನ್, ಆವಂತಿಕ, ಆರ್ಯನ್, ನೇಹಾ ಪಾಟೀಲ್ ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರ ಪಂಡಿತ್, ಸುಚಿತ್ರ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್‌ಬಂಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಶೇಷ ಜೋಡಿಯಾಗಿ ಖ್ಯಾತ ನಟರಾದ ಜಾನಿಲೀವರ್ ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಗರ` ಈ ವಾರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.