Chief Editor
Manohar. R (Manu)
Photo Journalist
chitrataramanu@gmail.com
+91 9845549026
`ತ್ರಿವಿಕ್ರಮ`ನ ಸ್ಪೆಷಲ್ ಒಂಟೆ ಮೇಲೆಯೇ ಫೈಟ್
Posted date: 31 Tue, Dec 2019 08:50:25 PM

೨೦೨೦ಕ್ಕೆ ಸ್ಯಾಂಡಲ್ ವುಡ್ ನಲ್ಲಿ ತೆರೆ ಕಾಣಲಿರೋ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೊ ಸಿನಿಮಾಗಳ ಪೈಕಿ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ‘ತ್ರಿವಿಕ್ರಮ‘ ಸಿನಿಮಾ ಕೂಡ ಒಂದು. ‘ರೋಸ್‘, ‘ಮಾಸ್ ಲೀಡರ್‘ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಸಹಾನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ. ಈಗಾಗಲೇ ಹಲವು ವಿಶೇಷತೆಗಳಿಂದ ಸ್ಯಾಂಡಲ್‌ವುಡ್ ಮಾತ್ರವಲ್ಲ ಇತರ ಚಿತ್ರರಂಗಗಳ ಗಮನ ಸೆಳೆಯುತ್ತಿರೊ ಚಿತ್ರದ ಪ್ರತಿ ಸಿಕ್ವೀಲ್ ಹಾಗೂ ಚಿತ್ರೀಕರಣದಲ್ಲೂ ಹೊಸತನ, ಹೊಸ ಪ್ರಯತ್ನವೇ ಈ ಕುತೂಹಲಕ್ಕೆ ಕಾರಣ. ಇದಕ್ಕೆ ಮತ್ತೊಂದು ಉದಾಹರಣೆ ಚಿತ್ರದಲ್ಲಿ ಮಾಡಿರೋ ಸಾಹಸ ಚಿತ್ರದ ಚಿತ್ರೀಕರಣ ಹಾಗೂ ಸೌತ್ ಇಂಡಿಯಾದ ಖ್ಯಾತ ಸಾಹಸ ನಿರ್ದೇಶಕರು ಸಾಹಸ ದೃಶ್ಯಗಳನ್ನ ಸೆರೆ ಹಿಡಿದಿರುವುದು.

ಒಂಟೆ ಮೇಲೆಯೇ ನಡೆದಿದೆ ಥ್ರಿಲ್ಲಿಂಗ್ ಫೈಟ್.
ಈ ಹಿಂದೆ ಚಿತ್ರಗಳಲ್ಲಿ ಸಾಂಗ್‌ಗಳ ಮೇಕಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಹೆಚ್ಚಿನ ಹಣ ಖರ್ಚು ಮಾಡಲಾಗುತಿತ್ತು. ಆದರೆ ಬದಲಾದ ಟ್ರೆಂಡ್‌ನಲ್ಲಿ ಸಿನಿಮಾಗಳ ಸಾಹಸ ದೃಶ್ಯಗಳಿಗೆ,  ಕ್ಲೈಮ್ಯಾಕ್ಸ್ ಸೀನ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇನ್ನೂ ‘ತ್ರಿವಿಕ್ರಮ‘ ಸಿನಿಮಾದಲ್ಲಿ ಸೌತ್ ಇಂಡಿಯಾ ಸಿನಿಮಾಗಳಲ್ಲೇ ನೀವು ನೋಡಿರದ ವಿಶೇಷ ದೃಶ್ಯಗಳನ್ನ ನೋಡಿ ಥ್ರಿಲ್ ಆಗಬಹುದು. ಅದುವೇ ಒಂಟೆ ಮೇಲಿನ ಫೈಟ್ ಹಾಗೂ ಒಂಟೆಗಳ ಮೂಲಕ ನಡೆಯೊ ಚೇಸಿಂಗ್ ಸೀನ್. ಬೈಕ್‌ಗಳ ಮೇಲೆ ನೀರಿನ ಒಳಗೆ, ಆಕಾಶದಲ್ಲಿ, ಕುದುರೆ, ಆನೆಗಳ ಮೇಲೆ ಸಮುದ್ರದಲ್ಲಿ ಹೀಗೆ ನಾನಾ ಬಗೆಯ ಫೈಟ್ ಸೀನ್‌ಗಳನ್ನ ನೀವು ನೋಡಿಯೇ ಇರುತ್ತೀರಾ, ಆದರೆ ಇದೇ ಮೊದಲ ಬಾರಿಗೆ ಒಂಟೆಗಳ ಮೇಲೆ ಫ಼ೈಟ್ ಸೀನ್ ಶೂಟ್ ಮಾಡಲಾಗಿದೆ, ಅಷ್ಟೇ ಅಲ್ಲ ಒಂಟೆಗಳನ್ನ ಬಳಸಿ ಚೇಸಿಂಗ್ ಸೀನ್ ಕೂಡ ಚಿತ್ರೀಕರಣ ಮಾಡಲಾಗಿದೆ. ಸೈರಾ, ದಬಾಂಗ್, ಬಾಡಿಗಾರ್ಡ್, ಪೊಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್, ಒಂಟೆ ಮೇಲಿನ ಸಾಹಸ ಸನ್ನಿವೇಶಗಳ ನಿರ್ದೆಶನ ಮಾಡಿದ್ದಾರೆ. ಅಭ್ಯಾಸ ಇಲ್ಲದವರು ಒಂಟೆ ಮೇಲೆ ಕೂತು ಒಂದು ಸುತ್ತು ಹಾಕೋದೆ ಕಷ್ಟ. ಅಂತದರಲ್ಲಿ  ನಟ ವಿಕ್ರಮ್ ಹಾಗೂ ಖಳ ನಟರು ಒಂಟೆಗಳ ಮೇಲೆ ಗಂಟೆಗಟ್ಟಲೆ ಕೂತು ಸಾಹಸ ಮಾಡಿರೋದು ಅವರ ಡೆಡಿಕೇಶನ್‌ಗೆ ಹಿಡಿದ ಕೈಗನ್ನಡಿ. ಇನ್ನೂ ಈ ದೃಶ್ಯಗಳ ಚಿತ್ರೀಕರಣಕ್ಕಾಗಿಯೇ ಸುಮಾರು ೧೫ ದಿನ, ಚಿತ್ರದ ನಟಿ ಆಕಾಂಕ್ಷ ಶರ್ಮಾ, ಹಾಸ್ಯ ನಟ ಸಾಧು ಕೋಕಿಲಾ, ಬಾಲಿವುಡ್ ಖ್ಯಾತ ನಟ ರೋಹಿತ್ ರಾಯ್ ಸೇರಿದಂತೆ ಇಡೀ ಚಿತ್ರತಂಡ ರಾಜಸ್ಥಾನದಲ್ಲಿ ಬೀಡು ಬಿಟ್ಟಿತ್ತು. ಇನ್ನೂ ಚಿತ್ರದ ಚಿತ್ರೀಕರಣದ ವೇಳೆ ಒಂಟೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾಕಷ್ಟು ಆರೈಕೆ ಮಾಡಿ ಪ್ರಾಣಿ ಪ್ರೀತಿಯನ್ನ ಚಿತ್ರತಂಡ ಮೆರೆದಿದೆ, ಅದಕ್ಕೆ ತಕ್ಕಂತೆ ಒಂಟೆಗಳು ಕೂಡ ಚಿತ್ರೀಕರಣಕ್ಕೆ ಸಹಕರಿಸಿವೆ. ಓಟ್ಟಾರೆ ಈ ಥ್ರಿಲ್ಲಿಂಗ್ ಫೈಟಿಂಗ್ ಸೀನ್ ನೋಡ ಬೇಕಾದ್ರೆ ತ್ರಿವಿಕ್ರಮ ತೆರೆಗೆ ಬರೋವರೆಗೂ ಕಾಯಲೇ ಬೇಕು.

ಗೌರಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶನ ಹಾಗೂ ನಾಗು ಅವರ ಕಲಾ ನಿರ್ದೇಶನವಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ತ್ರಿವಿಕ್ರಮ`ನ ಸ್ಪೆಷಲ್ ಒಂಟೆ ಮೇಲೆಯೇ ಫೈಟ್ - Chitratara.com
Copyright 2009 chitratara.com Reproduction is forbidden unless authorized. All rights reserved.