ಎಂ.ಎಸ್.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ಅವರು ನಿರ್ಮಿಸಿರುವ ‘ದಶರಥ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಸೋನಿಯ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಶೋಭ್‌ರಾಜ್, ಅವಿನಾಶ್, ಮೇಘಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಟೇಶ್ ಸಂಕಲನ, ಮದನ್ - ಹರಿಣಿ, ಕಲೈ, ಭೂಷ ನೃತ್ಯ ನಿರ್ದೇಶನ ಹಾಗೂ ಗಣೇಶ್(ಹೈದರಾಬಾದ್) ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.