Chief Editor
Manohar. R (Manu)
Photo Journalist
chitrataramanu@gmail.com
+91 9845549026
`ದಾರಿ ಯಾವುದಯ್ಯಾ ವೈಕುಂಠಕೆ` ಚಿತ್ರೀಕರಣ ‌ಪೂರ್ಣ
Posted date: 06 Mon, Jul 2020 03:47:07 PM

ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕ್ಕೆ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

ಲಾಕ್ ಡೌನ್ ತೆರವಿನ‌ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳ‌ ಚಿತ್ರೀಕರಣ ಪೂರ್ಣ ಮಾಡಲು ಅನುಮತಿ ನೀಡಿತು. ನಂತರ ಸರ್ಕಾರದ ಆದೇಶ ಪಾಲಿಸಿ ಬೆಂಗಳೂರಿನಲ್ಲಿ ‌ಕೊನೆಯ ಹಂತದ ಚಿತ್ರೀಕರಣ ಪೂರ್ಣ ಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ವರ್ಧನ್, ಅನುಷ, ಬಲ ರಾಜವಾಡಿ ಮುಂತಾದವರು ಈ‌ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ವಿಭಿನ್ನ ಕಥಾಹಂದರ ‌ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರ ಚಟುವಟಿಕೆ ಪ್ರಾರಂಭವಾಗಲಿದೆ .

ಈ ಹಿಂದೆ 'ಕೃಷ್ಣ ಗಾರ್ಮೆಂಟ್ಸ್' ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರದ ನಿರ್ದೇಶಕರು.
ವರ್ಧನ್ ತೀರ್ಥಹಳ್ಳಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ
ಪೂಜಾ, ಅನುಷಾ  'ಡಿಂಗ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ  ಅವರು ಶ್ರೀಮಾನ್ ಶ್ರೀ ಮತಿ ಹಾಗೂ ಅವಳು ಸುಜಾತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

'ತಿಥಿ' ಚಿತ್ರದ ಖ್ಯಾತಿ ಪೂಜಾ, ಬಲ ರಾಜ್ವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್ ಮೂರ್ತಿ, ಸಂಗೀತಾ, ಗೌಡಿ, ಸಿದ್ದಾರ್ಥ, ಪ್ರಣಯ್ ಮೂರ್ತಿ. ಇನ್ನು ಮುಂತಾದವರು  ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಭಗತ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.


 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ದಾರಿ ಯಾವುದಯ್ಯಾ ವೈಕುಂಠಕೆ` ಚಿತ್ರೀಕರಣ ‌ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.