Chief Editor
Manohar. R (Manu)
Photo Journalist
chitrataramanu@gmail.com
+91 9845549026
`ದಿ ವಿಲ್ಲನ್ ` ಗುರುವಾರ ನಾಳೆಯಿಂದ ಬಿಡುಗಡೆ
Posted date: 17 Wed, Oct 2018 09:03:00 AM

ಬಹಳ ನಿರೀಕ್ಷೆ ಇಂದ ಎದುರು ನೋಡುತ್ತಿರುವ, ದೊಡ್ಡ ಬಜೆಟಿನ ಸಿನಿಮಾ ಡಾ ಶಿವರಾಜಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರಥಮ ಮಲ್ಟಿ ಸ್ಟಾರ್ ಕನ್ನಡ ಸಿನೆಮಾ ‘ದಿ ವಿಲ್ಲನ್’ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ನಾಳೆಯಿಂದ ಬಿಡುಗಡೆ ಆಗುತ್ತಿದೆ.

 ‘ದಿ ವಿಲ್ಲನ್’ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳ ಚಿತ್ರ ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆ ಅಗಲಿರುವ ಸಿನಿಮಾ ತಾನ್ವಿ ಹಾಗೂ ಶಾನ್ವಿ ನಿರ್ಮಾಣ ಸಂಸ್ಥೆಯಲ್ಲಿ ಡಾ ಸಿ ಆರ್ ಮನೋಹರ್ ನಿರ್ಮಾಣ ಮಾಡಿರುವ ‘ದಿ ವಿಲ್ಲನ್’...ರಾಮ್ ಅಥವಾ ರಾವಣ್ ಎಂಬ ಉಪ ಶೀರ್ಷಿಕೆ ಇಟ್ಟುಕೊಂಡಿದೆ.

ಇದೆ ಮೊದಲ ಬಾರಿಗೆ ಬ್ರಿಟಿಷ್ ಹುಡುಗಿ ಪಾತ್ರದಲ್ಲಿ ಹಿಂದಿ ನಟಿ ಎಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ, ಮುಕುಲ್ ದೇವ್, ಮೇಖ ಶ್ರೀಕಾಂತ್, ಶರಣ್ಯ ಪೊಂವಣ್ಣನ್, ಶರತ್ ಲೋಹಿತಾಶ್ವ ಹಾಗೂ ಇತರರು ಅಭಿನಯಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇಂದ ಯು/ಎ ಅರ್ಹತಾ ಪತ್ರ ಸಿಕ್ಕಿದೆ.

ಅರ್ಜುನ್ ಜನ್ಯ ರಾಗ ಸಂಯೋಜನೆಯ ‘ದಿ ವಿಲ್ಲನ್’ ಚಿತ್ರದ ಆರು ಹಾಡುಗಳನ್ನು ರಚನೆ ಮಾಡಿರುವವರು ಚಿತ್ರದ ನಿರ್ದೇಶಕ ಪ್ರೇಮ್.

ಗಿರೀಶ್ ಆರ್ ಗೌಡ ಛಾಯಾಗ್ರಹಣ ‘ದಿ ವಿಲ್ಲನ್’ ‘ರಾಮ ರಾವಣರ’ ಕಾಳಗ ಮೂರು ಘಂಟೆ ಆವದಿಯಲ್ಲಿ ಮೂಡಿ ಬರಲಿದೆ. ಶ್ರೀ ನಿವಾಸ್ ಪಿ ಬಾಬು ಸಂಕಲನ, ರವಿ ವರ್ಮಾ, ಮಾಸ್ ಮಾಡು, ನುಂಗ್ ದಿ ಒನೆ (ಬ್ಯಾಂಗ್ಕಾಕ್ ) ಸಾಹಸ, ವಿ ನಾಗೇಶ್, ಮುರುಳಿ ನೃತ್ಯ, ರವಿ ಸಂತೆಹಕ್ಲು ಕಲಾ ನಿರ್ದೇಶನ, ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ, ಸೇತು ಸೌಂಡ್ ಎಫ್ಫೆಕ್ಟ್ಸ್, ರವಿ ಕುಮಾರ್, ಮಂಜುನಾಥ್ ಬಿ ಎಸ್, ಶಂಕರ್, ರಾಜ, ಅಪ್ಪು ಅಭಿಷೇಕ್, ಬಾಬು ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಮೇಶ್, ಸುರೇಶ್, ಬಸವರಾಜು ಕಾರ್ಯಕಾರಿ ನಿರ್ಮಾಪಕರುಗಳು, ಸಹಾಯಕ ಸಂಕಲನಾಕಾರ ವಿಜಯ್ ರಾಜ್ ಬಿ ಜೆ, ಪೋಸ್ಟರ್ ಡಿಸೈನ್ ಆವೇಸ್, ಸ್ಥಿರ ಚಿತ್ರಣ ನವೀನ್ ಒದಗಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ದಿ ವಿಲ್ಲನ್ ` ಗುರುವಾರ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.