Chief Editor
Manohar. R (Manu)
Photo Journalist
chitrataramanu@gmail.com
+91 9845549026
`ನನ್ನ ಪ್ರಕಾರ` ಚಿತ್ರದ ಹಾಡು ಬಿಡುಗಡೆ
Posted date: 25 Thu, Jul 2019 – 09:09:44 AM

ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡಿರುವ ‘ನನ್ನ ಪ್ರಕಾರ  ಚಿತಕ್ಕಾಗಿ ಕಿರಣ್ ಕಾವೇರಪ್ಪ ಅವರು ಬರೆದಿರುವ ‘ಹೂ ನಗೆ ಆಮಂತ್ರಿಸಿದೆ‘ ಎಂಬ ಹಾಡು ಜುಲೈ ೨೪ರ ಬುಧವಾರ ಸಂಜೆ ೫ಗಂಟೆಗೆ ಜೀ ಮ್ಯೂಸಿಕ್ ಸೌತ್ ಮೂಲಕ ಬಿಡುಗಡೆಯಾಗಲಿದೆ. ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ ಈ ಹಾಡಿಗೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಕಿಶೋರ್ ಹಾಗೂ ಪ್ರಿಯಾಮಣಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ  ಹುಲಿರಾಯ ಖ್ಯಾತಿಯ ಅರ್ಜುನ್‌ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನ್ವರ್ಷಿ, ವಿನಯ್‌ಬಾಲಾಜಿ, ಅವರ ಸಂಭಾಷಣೆ ಬರೆದಿದ್ದಾರೆ.  ಮನೋಹರ್‌ಜೋಷಿ ಛಾಯಾಗ್ರಹಣ,  ಸತೀಶ್ ಸಂಕಲನ ಡಿಫ಼ರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ - ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವಿನೋದ್ ರಾವ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು  ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಬರೆದಿದ್ದಾರೆ.

ಕಿಶೋರ್, ಪ್ರಿಯಾಮಣಿ, ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನನ್ನ ಪ್ರಕಾರ` ಚಿತ್ರದ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.