Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪಡ್ಡೆ ಹುಲಿ` ನಾಳೆಯಿಂದ ಬಿಡುಗಡೆ
Posted date: 18 Thu, Apr 2019 04:47:54 PM

ಕನ್ನಡ ಚಿತ್ರರಂಗಕ್ಕೆ ಜನಪ್ರಿಯ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಪಾದಾರ್ಪಣೆ ಮಾಡುತ್ತಿರುವ ಚಿತ್ರ ‘ಪಡ್ಡೆ ಹುಲಿ’ ಅನೇಕ ವಿಶೇಷತೆಗಳನ್ನು ತುಂಬಿಕೊಂಡು ನಾಳೆಯಿಂದ  ಬಿಡುಗಡೆ ಆಗುತ್ತಿದೆ.
‘ಪಡ್ಡೆ ಹುಲಿ’ ಚಿತ್ರದ ನಿರ್ಮಾಪಕ ಎಂ ರಮೇಶ್ ರೆಡ್ಡಿ (ನಂಗ್ಲಿ). ತೇಜಸ್ವಿನಿ ಎಂಟೆರ್ಪ್ರೈಸಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಗುರು ದೇಶಪಾಂಡೆ. ಶ್ರೇಯಸ್ ಪ್ರಥಮ ಹೆಜ್ಜೆಗೆ ಡಾ ವಿಷ್ಣುವರ್ಧನ ಅವರ ನೆರಳು ಇದೆ. ಚಿತ್ರವನ್ನು ಚಿತ್ರದುರ್ಗದ ಹಿನ್ನಲೆ ಅಲ್ಲಿ ಡಾ ವಿಷ್ಣುವರ್ಧನ ನೆನಪಿಸುವ ಹಾಗೆ ಸಹ ಕಥೆ ಮಾಡಲಾಗಿದೆ. ನಿಶ್ವಿಕ ನಾಯ್ಡು ಚಿತ್ರದ ಕಥಾ ನಾಯಕಿ. ವಿ ರವಿಚಂದ್ರನ್ ನಾಯಕ ಶ್ರೇಯಸ್ ತಂದೆಯ ಪಾತ್ರದಲ್ಲಿ. ಅತಿಥಿ ಪಾತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ಮಧುಸೂಧನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ ಹಾಗೂ ಇತರರು ಇದ್ದಾರೆ.
ಈ ಚಿತ್ರದ ಪ್ರಮುಖ ಅಂಶಗಳಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್  ಪಡ್ಡೆ ಹುಲಿ ಚಿತ್ರದಲ್ಲಿ ಶ್ರೀ ಬಸವಣ್ಣ ಅವರ ಕಳಬೇಡ...ಕೊಲಬೇಡ...ಹುಸಿಯ ನುಡಿಯಲೂ ಬೇಡ....ಬಿ ಆರ್ ಲಕ್ಷ್ಮಣ್ ರಾವ್ ಅವರ ‘ಹೇಳಿ ಹೋಗು ಕಾರಣ...ಜಿ ಪಿ ರಾಜರತ್ನಂ ಅವರ‘ಹೆಂಡ ಹೆಡ್ತಿ ಕಾಣದ ಪದಗೊಳ್ ಅಂದ್ರೆ ರತ್ನಾಂಗ್ ಪ್ರಾಣ... ಡಿ ವಿ ಜಿ ಅವರ ‘ಬದುಕು ಜಟಕಾ ಬಂಡಿ...ವಿಡಿ ಅದರ ಸಾಹೇಬ...ಕೆ ಎಸ್ ನರಸಿಂಹ ಸ್ವಾಮಿ ಅವರ ‘ನಿನ್ನ ಪ್ರೇಮದ ಪರಿಯ ನಾನಾರಿಯೆ ಕನಕಾಂಗಿ....ಹಾಡುಗಳನ್ನು ಮರು ಸಂಯೋಜನೆ ಮಾಡಿ ಹಾಡಿಸಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ಐದು ಹಾಡುಗಳಿಗೆ ಅಜನಿಷ್ ಲೋಕನಾಥ್ ಸ್ವರ ಸಂಯೋಜನೆ ಮಾಡಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಸಹ ಇದೆ.
ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ ಎಂ ಪ್ರಕಾಷ್  ಸಂಕಲನ, ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ಸಾಹಸ, ಮದನ್ ಹರಿಣಿ, ವಿ ಮುರಳಿ, ಕಲೈ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪಡ್ಡೆ ಹುಲಿ` ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.