Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮತ್ತೆ ಉದ್ಭವ` ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ
Posted date: 01 Thu, Aug 2019 02:13:04 PM

ವೈಟ್ ಪ್ಯಾಂಥರ‍್ಸ್ ಕ್ರಿಯೇಟರ್ಸ್ ಸಂಸ್ಥೆಯವರು ನಿರ್ಮಿಸುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ‘ ಚಿತ್ರದ ಚಿತ್ರೀಕರಣ ಬಹುತೇಕ(ಶೇಕಡ 95ರಷ್ಟು) ಪೂರ್ಣವಾಗಿದೆ. ಹಾಡು ಹಾಗೂ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ವಿ.ಮನೋಹರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ಎಸ್.ಮೋಹನ್ ಸಂಭಾಷಣೆ ಬರೆದಿದ್ದಾರೆ. ವಸಂತ್‌ರಾವ್ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷ ಪುರೋಹಿತ್ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್ ಮುದ್ರಾಡಿ.

`ಪ್ರಿಮಿಯರ್ ಪದ್ಮಿನಿ‘ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಿಲನ ನಾಗರಾಜ್. ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷ, ಮಂಡ್ಯ ರವಿ, ಪಿ.ಡಿ.ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮತ್ತೆ ಉದ್ಭವ` ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.