Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮೆಹಬೂಬ` ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ
Posted date: 31 Tue, Dec 2019 – 08:44:55 PM

ಸ್ಕಂದ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರಸನ್ನ.ಎಸ್ ಅವರು ನಿರ್ಮಿಸಿರುವ `ಮೆಹಬೂಬ` ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಬೆಂಗಳೂರಿನ ಹೆಚ್.ಎಂ.ಟಿ ಬಳಿ ನಿರ್ಮಿಸಲಾಗಿರುವ ಪೊಲೀಸ್ ಸ್ಟೇಷನ್ ಸೆಟ್‌ನಲ್ಲಿ ನಡೆಯುತ್ತಿದೆ. ಕಬೀರ್ ಸಿಂಗ್, ಶಶಿ, ಪಾವನ, ಬುಲೆಟ್ ಪ್ರಕಾಶ್, ಜೈಜಗದೀಶ್, ಶಿವರಾಂ, ಲಯಕೋಕಿಲ, ಕಲ್ಯಾಣಿರಾಜು ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಈ ಹಿಂದೆ ‘ಕಥಾ ವಿಚಿತ್ರ‘ ಚಿತ್ರವನ್ನು ನಿರ್ದೇಶಿಸಿದ್ದ, ಅನೂಪ್ ಅಂತೋನಿ ನಿರ್ದೇಶನದ ಈ ಚಿತ್ರದ ನಾಯಕರಾಗಿ `ಬಿಗ್‌ಬಾಸ್` ಖ್ಯಾತಿಯ ಶಶಿ ಅಭಿನಯಿಸುತ್ತಿದ್ದಾರೆ. `ಗೊಂಬೆಗಳ ಲವ್`ಖ್ಯಾತಿಯ ಪಾವನ ಈ ಚಿತ್ರದ ನಾಯಕಿ. ಕಬೀರ್ ಸಿಂಗ್, ಶಶಿ, ಪಾವನ, ಬುಲೆಟ್ ಪ್ರಕಾಶ್, ಜೈಜಗದೀಶ್, ಶಿವರಾಂ, ಮೋಹನ್ ಜುನೇಜ,  ಲಯಕೋಕಿಲ, ಕಲ್ಯಾಣಿರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಹಿಂದೆ `ನೀರ್ ದೋಸೆ` ಹಾಗೂ `ಬ್ಯೂಟಿಫ಼ುಲ್ ಮನಸುಗಳು` ಚಿತ್ರವನ್ನು ನಿರ್ಮಿಸಿದ್ದ ಪ್ರಸನ್ನ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.  ಕಲೈ ಈ ಚಿತ್ರದ ನೃತ್ಯ ನಿರ್ದೆಶಕರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮೆಹಬೂಬ` ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.