ಆರ್.ಕೆ.ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಜಿ.ಎಮ್.ರಮೇಶ್ ಹಾಗೂ ಕಿರಣ್ ಕೆ ಅವರು ನಿರ್ಮಿಸಿರುವ ‘ರಾಜೀವ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಫ಼್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕ ಜಿ.ಎಮ್.ರಮೇಶ್ ಕಥೆ ಬರೆದಿದ್ದಾರೆ. ಆನಂದ ಇಳೆಯರಾಜ ಛಾಯಾಗ್ರಹಣ, ವಿಜಯ್ ಸೋವರ್ ಸಂಕಲನ ಹಾಗೂ ವರ್ಧನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಕಾಕೋಳು ರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಶೇಖರ್ ಸೋವರ್ ಹಾಡುಗಳನ್ನು ರಚಿಸಿದ್ದಾರೆ.
ಮಯೂರ್ ಪಟೇಲ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ, ಅಕ್ಷತ ಶ್ರೀಧರ್‌ಶಾಸ್ತ್ರಿ, ಶಂಕರ್ ಅಶ್ವತ್, ಮದನ್ ಪಟೇಲ್, ನಿಹಾರಿಕ, ವರ್ಧನ್, ಬಸವರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.