Chief Editor
Manohar. R (Manu)
Photo Journalist
chitrataramanu@gmail.com
+91 9845549026
`ವಿಕ್ಕಿ` ಚಿತ್ರದ ಚಿತ್ರೀಕರಣ ಮುಕ್ತಾಯ
Posted date: 08 Wed, Aug 2018 11:41:05 AM

 ಶ್ರೀಬನಶಂಕರಿ ಮೂವೀ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ವಿಕ್ಕಿ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.  
ಎಸ್.ರಮೇಶ್(ಬನಶಂಕರಿ) ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶನವನ್ನು ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೆಚ್.ಡಿ.ದೇವನಕೋಟೆ ಮುಂತಾದಕಡೆ ೪೫ದಿನಗಳ ಚಿತ್ರೀಕರಣ ನಡೆದಿದೆ. ಕೌಟುಂಬಿಕ, ಸಾಹಸ ಹಾಗೂ ಪ್ರೇಮಕಥೆಯ ಕಥಾವಸ್ತುವುಳ್ಳ ಈ ಚಿತ್ರಕ್ಕೆ ಆರ್.ಗಿರಿ ಅವರ ಛಾಯಾಗ್ರಹಣವಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಪೀಟರ್ ಸಂಗೀತ ನೀಡಿದ್ದಾರೆ. ದೊಡ್ಡರಂಗೇಗೌಡ ಹಾಗೂ ಎಂ.ಎನ್.ವ್ಯಾಸರಾವ್ ಗೀತರಚನೆ ಮಾಡಿದ್ದಾರೆ. ರಾಜಶೇಖರ್ ರೆಡ್ಡಿ ಸಂಕಲನ, ಅಕುಲ್, ಗಿರಿ ನೃತ್ಯ ನಿರ್ದೇಶನ ಹಾಗೂ ಆಕ್ಷನ್ ಮೂರ್ತಿ ಅವರ ಸಾಹಸ ನಿರ್ದೆಶನವಿರುವ ಈ ಚಿತ್ರಕ್ಕೆ ಸೂರ್ಯಸತೀಶ್ ಸಂಭಾಷಣೆ ಬರೆದಿದ್ದಾರೆ.
ಆರ್ಯನ್, ರಿದಿ ರಾವ್, ರವಿಕಲ್ಯಾಣ್, ಸುಂದರರಾಜ್, ಕೀರ್ತಿ, ಮನಮೋಹನ್ ರಾಯ್, ರೇಣು, ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ವಿಕ್ಕಿ` ಚಿತ್ರದ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.