Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಶೈಬ್` ಚಿತ್ರದ ಚಿತ್ರೀಕರಣ ಪೂರ್ಣ
Posted date: 01 Thu, Aug 2019 12:48:52 PM

 ಶ್ರದ್ಧಾ ಮೂವೀಸ್ ಲಾಂಛನದಲ್ಲಿ ಯಶೋಧ ಸಣ್ಣಪನವರ್ ಅವರು ನಿರ್ಮಿಸಿರುವ `ಶೈಬ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ 48 ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಕಾರ್ಯಗಳು ಮುಕ್ತಾಯವಾಗಿದ್ದು, ಸದ್ಯದಲ್ಲೇ ಚಿತ್ರ ಸೆನ್ಸಾರ್ ಮುಂದೆ ಬರಲಿದೆ.

ಒಬ್ಬ ಕೆಳದರ್ಜೆ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ಅವಶ್ಯಕವಾದ ಸಂಪತ್ತನ್ನು, ಹೆಸರನ್ನು ಗಳಿಸಲು ಮೌಡ್ಯಗಳ ಬೆನ್ನೇರಿ ಹೊರಟಾಗ ಬರಸಿಡಿಲಿನಂತೆ ಕೆಲವೊಂದು ಅಚಾತುರ್ಯಗಳು ಶುರುವಾಗುತ್ತ ಹೋಗುತ್ತದೆ. ಹೀಗೆ ಸಾಗುವ ಚಿತ್ರಕಥೆಯ ಅಂತ್ಯವೇನು? ಮೂಡನಂಬಿಕೆ ಪ್ರಪಂಚದ ಜನರನ್ನು ಎಷ್ಟು ಆವರಿಸಿದೆ ಅನ್ನುವುದೇ  ಚಿತ್ರದ ತಿರುಳು. ‘ಶೈಬ್ಯ‘ ರೊಮ್ಯಾಂಟಿಕ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾ ಆಧಾರಿತ ಚಿತ್ರ.

ನಿರ್ಮಾಪಕಿ ಯಶೋಧ ಸಣ್ಣಪ್ಪನವರ್ ಅವರು ಬರೆದಿರುವ ಕಥೆಗೆ ಎಂ.ಜಿ.ಆರ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.  ಎಂ.ಜಿ.ಆರ್ ಅವರು ತೆಲುಗಿನ ಕೆಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.

ರಂಗಭೂಮಿಯಲ್ಲಿ 2 ವರ್ಷ ಅನುಭವವಿರುವ, ಹರಹರ ಮಹದೇವ, ತ್ರಿವೇಣಿ ಸಂಗಮ, ಶಾಂತಂ ಪಾಪಂ ಮುಂತಾದ ಧಾರಾವಾಹಿಗಳಲ್ಲಿ ಹಾಗೂ ಕೇಸ್ ನಂ 18\9, ದರ್ಪಣ, ಲೈಲಾ ಮಜ್ನು ಲವ್ ಸ್ಟೋರಿ ಚಿತ್ರಗಳಲ್ಲಿ ನಟಿಸಿರುವ ಸನ್ಮಿತ್ ವಿಹಾನ್ ಈ ಚಿತ್ರದ ನಾಯಕ. ಮೇಘಶ್ರೀ ಗೌಡ, ಮಿಲನ ರಮೇಶ್, ಗಣೇಶ್ ರಾವ್, ಕುರಿ ಪ್ರತಾಪ್, ಮಣಿಕುಮಾರ್, ಮನು, ರಚಿತ, ಕವಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎರಡು ಹಾಡುಗಳಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ನಾಗರಾಜ ಮೂರ್ತಿ ಛಾಯಾಗ್ರಹಣ ಹಾಗೂ ಆಲ್ವಿನ್, ಶಿವಶಂಕರ್ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಸಿದ್ದು ಒಡೆಯರ್ ಬರೆದಿದ್ದಾರೆ. ಗಗನ್ ಕುಮಾರ್ ಹಿನ್ನಲೆ ಸಂಗೀತ ನೀಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಶೈಬ್` ಚಿತ್ರದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.