Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಗ್ರಸೇನ ಕೊನೇ ಹಂತದ ಚಿತ್ರೀಕರಣ
Posted date: 01 Thu, Aug 2019 01:18:04 PM

ಎನ್ ಕೆ ಮುರುಗೇಶ್ ನಿರ್ದೇಶನ ಚಿತ್ರ ಅಗ್ರಸೇನ ಕೊನೇ ಹಂತದ ಚಿತ್ರೀಕರಣಕ್ಕೆ ತಲುಪಿದೆ. ಆಗಸ್ಟ್ ೫ ರಿಂದ ಬಾಕಿ ಉಳಿದಿರುವ ಒಂದು ಹಾಡು ಹಾಗೂ ಸಾಹಸ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲು ವೈಷ್ಣವಿ ಸಿನಿಮಾಸ್‌ನ ನಿರ್ಮಾಪಕಿ ಶ್ರೀಮತಿ ಮಮತ ಜಯರಮಾ ರೆಡ್ಡಿ ತೀರ್ಮಾನಿಸಿದ್ದಾರೆ.

ಇತ್ತೀಚಿಗೆ ‘ಚುಟು ಚುಟು... ಹಾಡಿನ ಗಾಯಕ ರವೀಂದ್ರ ಸೊರಗವಿ ಮತ್ತು ಗೀತ ರಚನೆಕಾರ ಶಿವು ಬೆರಗಿ ರಚಿಸಿದ ಚಂದಿರ ನಾನು ನಿನ್ನ....ಎಂದು ಶುರು ಆಗುವ ಹಾಡನ್ನು ಬೆಂಗಳೂರು ಹಾಗೂ ಯೆಲೆಕೊಡೆಯೆನಹಳ್ಳಿ ಅಲ್ಲಿ ನೈಟ್ ಎಫೆಕ್ಟ್ ಅಲ್ಲಿ ಕೆ ಜಿ ಎಫ್ ನೃತ್ಯ ನಿರ್ದೇಶಕ ಮೋಹನ್ ಮಾಸ್ಟೆರ್ ಹಾಡಿಗೆ ನೃತ್ಯ ನಿರ್ದೇಶನ ಮಾಡಿದರು. ಚುಟು ಚುಟು...ಹಾಡಿನ ಖ್ಯಾತಿ ನಂತರ ಮತ್ತೆ ಇದೆ ಚಿತ್ರಕ್ಕೆ ಗಾಯಕ ಹಾಗೂ ಲೇಖಕ ಜೊತೆಯಾಗಿರುವುದು. ಈ ಹಾಡಿಗೆ ಖ್ಯಾತ ಜಾನಪದ ಗಾಯಕ ಹಾಗೂ ನಟ ಗುರುರಾಜ ಹೊಸಕೋಟೆ ಪಾತ್ರ ನಿರ್ವಹಿಸಿದ್ದಾರೆ. ಈ ಹಾಡಿನಲ್ಲಿ ಪ್ರೀತಿ, ವಿರಹ, ಜೀವನದ ಅರ್ಥ ಮತ್ತು ಚಿತ್ರದ ಕೆಲವು ಅಂಶಗಳನ್ನು ಸಹ ತಿಳಿಸಲಾಗಿದೆ.

ನಿರ್ದೇಶಕ ಮುರುಗೇಶ್ ಸಹಾಯಕ ನಿರ್ದೇಶಕ ಆಗಿ ಎ ಹರ್ಷ ಅವರ ಚಿಂಗಾರಿಯಿಂದ  ಅಂಜನಿಪುತ್ರವರೆಗೂ ಕೆಲಸ ಮಾಡಿದವರು ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಹಳ್ಳಿ ಹಾಗೂ ನಗರದ ಜೀವನದ ತುಲನೆ ಜೊತೆಗೆ ಕುಟುಂಬಕ್ಕೆ ಬೇಕಾದ ಸೆಂಟಿಮೆಂಟ್ ದೃಶ್ಯಗಳನ್ನು ಅಳವಡಿಸಿದ್ದಾರೆ.
ಬೆಳಗಾವಿಯ ಚಚ್ಚಡಿ ವಾಡೆಯಲ್ಲಿ ನಾಗರಾಜ ದೇಸಾಯಿ ಅವರ ಅನುಮತಿಯೊಂದಿಗೆ ೧೫ ದಿವಸಗಳ ಕಾಲ ಚಿತ್ರೀಕರಣ ಈ ‘ಅಗ್ರಸೇನ’ ಚಿತ್ರಕ್ಕೆ ನಡೆಸಲಾಗಿದೆ. ಆ ನಂತರ ಬೆಂಗಳೂರಿನಲ್ಲಿ ೧೦ ದಿವಸಗಳ ಕಾಲ ಚಿತ್ರೀಕರಣ ಸಹ ಮಾಡಲಾಗಿದೆ ಎಂದು ನಿರ್ದೇಶಕ ಮುರುಗೇಶ್ ತಿಳಿಸುತ್ತಾರೆ.

ಅಪ್ಪನ ಪಾತ್ರವನ್ನು ಹಿರಿಯ ನಟ ರಾಮಕೃಷ್ಣ ನಿರ್ವಹಿಸುತ್ತಿದ್ದು ಇದು ಅವರ ೨೦೦ ನೇ ಚಿತ್ರ. ಈ ಚಿತ್ರದಿಂದ ಅಮರ್ ಎಂಬ ಯುವಕ ಪರಿಚಯವಾಗುತ್ತಿದ್ದಾನೆ. ರಚನ ದಾಶರಥ್ ನಾಯಕಿ, ಎಚ್ ವಿ ಕೃಷ್ಣ, ಮೀನಾಕ್ಷಿ ಕಿರು ತೆರೆ ನಟಿ ತಾಯಿ ಆಗಿ ಅಲ್ಲದೆ ನಿರ್ಮಾಪಕರ ಪುತ್ರಿ ತನಿಶ ರೆಡ್ಡಿ ಸಹ ತಾರಾಗಣದಲಿದ್ದಾರೆ.

ಆರ್ ಪಿ ರೆಡ್ಡಿ ಛಾಯಾಗ್ರಹಣ, ಎಂ ಎಸ್ ತ್ಯಾಗರಾಜ್ ಸಂಗೀತ, ಚೇತನ್ ಕುಮಾರ್, ಗೌಸ್ ಪೀರ್, ವಿಜಯ್, ಶಿವು ಬೆರಗಿ ಗೀತೆಗಳು, ಕುಂಗ್ ಫೂ ಚಂದ್ರು ಸಾಹಸ. ವಿಜಯ್ ಎಂ ಕುಮಾರ್ ಸಂಕಲನ ಮಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಗ್ರಸೇನ ಕೊನೇ ಹಂತದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.