Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಮ್ಮಂದಿರ ದಿನಕ್ಕಾಗಿ `ವಿಜಯರಥ` ಚಿತ್ರದ ಲಿರಿಕಲ್ ಹಾಡು ಬಿಡುಗಡೆ
Posted date: 14 Tue, May 2019 08:56:09 PM

ವೃಕ್ಷ ಕ್ರಿಯೇಷನ್ಸ್ ಬ್ಯಾನರ‍್ಸ್ ಅಡಿಯಲ್ಲಿ, ರಮೇಶ್.ಎಸ್.ಆರ್ ಮಧುಗಿರಿ ನಿರ್ಮಿಸಿರುವ ಚೊಚ್ಚಲ ಚಿತ್ರ `ವಿಜಯರಥ`.
    ಅಜಯ್ ಸೂರ್ಯ ನಿರ್ದೇಶನದ `ವಿಜಯರಥ` ಚಿತ್ರವು ಹತ್ತು ಹಲವಾರು ಅಚ್ಚರಿಗಳ ಮೊತ್ತವಾಗಿದ್ದು, ಇದುವರೆಗೂ ಕನ್ನಡ-ತೆಲುಗು-ಹಿಂದಿ ಚಿತ್ರಗಳಿಗೆ ಸಹ-ನಿರ್ದೇಶನ ಮಾಡುತ್ತಾ, ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಸಂತ್‌ಕಲ್ಯಾಣ್ ಈ ಚಿತ್ರದ ನಾಯಕ ನಟ, ಈ ಚಿತ್ರದ ವಿಶೇಷತೆಯೆಂಬಂತೆ ಕೆ.ಜಿ.ಎಫ್‌ಚಿತ್ರ ಖ್ಯಾತಿಯ ಅರ್ಚನಾ, ಪ್ರಥಮಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದು, ಅರ್ಪಿತಾಗೌಡ ರವರು ಮತ್ತೋರ್ವ ನಾಯಕಿಯಾಗಿ ನಟಿಸಿದ್ದಾರೆ, ರಾಜೇಶ್ ನಟರಂಗ, ಹನುಮಂತೇಗೌಡ ನಿಹಾರಿಕಾ ಸೇರಿದಂತೆ ಅನುಭವಿ ಕಲಾವಿದರ ದಂಡೆ ಚಿತ್ರದಲ್ಲಿದೆ.
ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಚಿತ್ರವು ಜೈಆಂಜನೇಯ........... ಎಂಬ ಕೈಲಾಷ್‌ಕೇರ್ ಹಾಡಿರುವ ಹಾಡನ್ನು ಮತ್ತು ಟಾಪ್ ಮೇಲೆ ಕುಂತಗಾಡು....... ಎಂಬ ವಿಜಯ್ ಪ್ರಕಾಶ್‌ರವರು ಹಾಡನ್ನು ಲಿರಿಕಲ್ ವೀಡಿಯೋವನ್ನು ಆನಂದ್‌ಆಡಿಯೋ ಮೂಲಕ ಬಿಡುಗಡೆ ಮಾಡಿದ್ದು.... ಎರಡೂ ಹಾಡುಗಳು ವೈರಲ್‌ಆಗಿದ್ದು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ ಜೈಆಂಜನೇಯ ಹಾಡಂತು....... ವಾಟ್ಸ್‌ಆಪ್, ಶೇರ್‌ಷಾಟ್ಸ್‌ನಲ್ಲಿ ಮೂರು ಮಿಲಿಯನ್ ವೀಕ್ಷಣೆ ಪಡೆದಿದೆ.
    `ವಿಜಯರಥ` ಚಿತ್ರತಂಡವು `ವಿಶ್ವಅಮ್ಮಂದಿರ ದಿನಾಚರಣೆ` ಪ್ರಯುಕ್ತ ದಿನಾಂಕ : 12/05/2019 ಅಮ್ಮಾ.........ಅಮ್ಮ........ ಎಂಬ ಲಿರಿಕಲ್‌ವೀಡಿಯೋವನ್ನು ಬಿಡುಗಡೆ ಮಾಡುತ್ತಿದ್ದು, ಎಸ್.ಪ್ರೇಮ್‌ಕುಮಾರ್‌ರವರ ಸಂಗೀತಕ್ಕೆ ಚಂದ್ರು.ಎಸ್.ಎಲ್‌ರವರ ಸಾಹಿತ್ಯವಿದೆ, ವಿಜಯ ಪ್ರಕಾಶ್‌ರವರು ಈ ಹಾಡನ್ನು ಹಾಡಿದ್ದು `ಕಂದನ ಮೊದಲ ತೊದಲೆ ಅಮ್ಮಾನೆ........ ಎಂಬ ಪ್ರಾರಂಬಿಕ ಸಾಲಿನೊಂದಿಗೆ ಶುರುವಾಗುವ ಸಾಹಿತ್ಯವು ಹೃದಯ ಸ್ಪರ್ಶಿಯಾಗಿದ್ದು.ತಾಯಿಯೇ ದೇವರಿಗೂ ದೇವರುಎಂದು ಸಾರುವಂತಹ ಬಿನ್ನ ಸಾಹಿತ್ಯದಿಂದಕೂಡಿದೆ. ಈಗಾಗಲೇ ಬಿಡುಗಡೆಗೊಂಡ ಎರಡು ಹಾಡುಗಳಿಗೆ ಸಿಕ್ಕಂತ ಬೆಂಬಲ ಅಮ್ಮ ಹಾಡಿಗೆ ದುಪ್ಪಟ್ಟಾಗಬಹುದೆಂಬ ನಂಬಿಕೆ ಚಿತ್ರತಂಡಕ್ಕಿದ್ದು..... ಇದುವರೆಗೂ ಈ ಹಾಡನ್ನು ಕೇಳಿರುವ ಎಲ್ಲರೂಅಮ್ಮ ಸಾಹಿತ್ಯಕ್ಕೆತಲೆದೂಗಿದ್ದಾರೆ ಆ ಕಾರಣದಿಂದಲೇ ಈ ಹಾಡನ್ನು ಅಮ್ಮಂದಿರ ದಿನದಂತೆ ಚಿತ್ರತಂಡವು ಆನಂದ್‌ಆಡಿಯೋ ಮೂಲಕ ಕನ್ನಡಿಗರ ಮಡಿಲಿಗೆ ನೀಡುತ್ತಿದ್ದಾರೆ.ಜೊತೆಗೆಎಲ್ಲರೂಅಮ್ಮನ ಮಕ್ಕಳೇ ಆಗಿರೋ ಹಿನ್ನೆಲೆಯಲ್ಲಿ ಹಾರೈಕೆ ಹಾಡಿಗೂ.... ಚಿತ್ರಕ್ಕೂ ಸಿಗಲಿ ಎಂದು ಚಿತ್ರತಂಡದ ಆಶಯವಾಗಿದೆ. ಅಂದಹಾಗೆ ಚಿತ್ರದಲ್ಲಿ ಬರುವ ಎಲ್ಲಾ ಹಾಡುಗಳಿಗೂ ಚಂದ್ರುಎಸ್.ಎಲ್. ಮಧುಗಿರಿಯವರ ಸಾಹಿತ್ಯವಿದ್ದು. ಎಸ್.ಪ್ರೇಮ್‌ಕುಮಾರ್ ಸಂಗೀತ ಒದಗಿಸಿದ್ದಾರೆ `ಅಕಿರಾ` ನಡುವೆ `ಅಂತರವಿರಲಿ` ಚಿತ್ರಗಳಿಗೆ ತನ್ನಕ್ಯಾಮೆರಾಕಣ್‌ಸನ್ಹೆ ಮೂಲಕ ಮನೆಮಾತಾದ ಯೋಗಿ ಯವರ ಛಾಯಾಗ್ರಹಣ ವಿಜಯರಥಕ್ಕಿದ್ದು. `ಮಮ್ಮಿ` & `ಜೂಮ್` ಹಿಟ್ ಚಿತ್ರಗಳ ರಾಜ್ಯ ಪ್ರಶಸ್ತಿ ವಿಜೇತರಾದ ಸಿ.ರವಿಚಂದ್ರನ್‌ರವರ ಸಂಕಲನ ಭೂಷಣ್‌ರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
    ಈಗಾಗಲೇ ಸೆನ್ಸಾರ್ ಯುದ್ದ ಗೆದ್ದು ಬಂದಿರೋ ಚಿತ್ರದ ಬಗ್ಗೆ ಇಡೀ ಸೆನ್ಸಾರ್ ಮಂಡಳಿಯು ಮೆಚ್ಚುಗೆಯ ಮಾತಾಡಿದ್ದು ಪ್ರಥಮ ಬಾರಿಗೆ ತೆಲುಗು ಚಿತ್ರರಂಗದ ಖ್ಯಾತಗಾಯಕ (ಗೀತಾಗೋವಿಂದಂ ಚಲೋ ಆರ್‌ಎಕ್ಸ್೧೦೦ ಖ್ಯಾತಿ) ಅನುರಾಗ್‌ಕುಲಕರ್ಣಿ ವಿಜಯರಥಚಿತ್ರಕ್ಕಾಗಿ ಹಾಡಿದ್ದಾರೆ.ಮೇ ತಿಂಗಳಿಂದಲೇ ಚಿತ್ರದ ಪ್ರಚಾರಕಾರ್ಯವನ್ನು ಕರ್ನಾಟಕದಾದ್ಯಂತ ಹಮ್ಮಕೊಂಡಿರೋ ಚಿತ್ರತಂಡ ತಿಂಗಳ ಕೊನೆಯಲ್ಲಿ ಟ್ರೇಲರ್&ಆಡಿಯೋ ಬಿಡುಗಡೆಮಾಡುತ್ತಿದ್ದು, ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆತರುವುದಾಗಿ ಚಿತ್ರದ ನಿರ್ಮಾಪಕರಾದ ರಮೇಶ್.ಎಸ್.ಆರ್ ಮಧುಗಿರಿಯವರು ತಿಳಿಸಿರುತ್ತಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಮ್ಮಂದಿರ ದಿನಕ್ಕಾಗಿ `ವಿಜಯರಥ` ಚಿತ್ರದ ಲಿರಿಕಲ್ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.