Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಸತೋಮ ಸದ್ಗಮಯ ಚಿತ್ರದಲ್ಲಿ ಬೇಬಿ ಚಿತ್ರಾಲಿ
Posted date: 11 Sat, Nov 2017 09:08:48 AM
ರಂಗಿತರಂಗ ಬೆಡಗಿ ರಾಥಿಕಾ  ಚೇತನ್ ಪ್ರಮುಖ ತಾರಾಗಣದಲ್ಲಿರುವ "ಅಸತೋಮ ಸದ್ಗಮಯ" ಚಿತ್ರದಲ್ಲಿ ಮಕ್ಕಳ ಒಂದು ದೊಡ್ಡ ದಂಡೇ ಇದೆಯಂತೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾದ, ಕಳೆದ  ಸಾಲಿನ ಡ್ರಾಮಾ ಜೂನಿಯರ್ ವಿನ್ನರ್ ಬೇಬಿ ಚಿತ್ರಾಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾಳೆ. ಝೀಟಿವಿಯಲ್ಲಿ ಪ್ರಸಾರವಾಗುತ್ತಿರುವ "ವಾರಸ್ದಾರ" ಸೀರಿಯಲ್‌ನಲ್ಲಿ ತನ್ನ ಅಬಿನಯದ ಮೂಲಕ ಜನಮನ ಗೆದ್ದಿರುವ  ಚಿತ್ರಾಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾಳೆ. "ಅಸತೋಮ ಸದ್ಗಮಯ" ಚಿತ್ರದ ಮೂಲಕ ಮೊದಲ ಬಾರಿಗೆ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾಳೆ. ಈ ಚಿತ್ರದಲ್ಲೂ ತನ್ನ ಮುದ್ದು ಅಬಿನಯದಿಂದ ತನ್ನ ಅಭಿಮಾನಿಗಳಿಗೆ ಇಷ್ಟವಾಗುತ್ತಾಳೆ ಎನ್ನುತ್ತಾರೆ ನಿರ್ದೇಶಕರು. ಜೊತೆಗೆ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಈಗಾಗಲೆ ಪ್ರೇಕ್ಷಕರ ಗಮನ ಸೆಳೆದಿರುವ ಬಹಳಷ್ಟು  ಮಕ್ಕಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ. 
ಈ ಚಿತ್ರವನ್ನು ಐಕೇರ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರ ನಿರ್ಮಿಸುತ್ತಿದ್ದು, ರಾಜೇಶ್ ವೇಣೂರು ನಿರ್ದೇಶಿಸುತ್ತಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಸತೋಮ ಸದ್ಗಮಯ ಚಿತ್ರದಲ್ಲಿ ಬೇಬಿ ಚಿತ್ರಾಲಿ - Chitratara.com
Copyright 2009 chitratara.com Reproduction is forbidden unless authorized. All rights reserved.