Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಗಸ್ಟ್ 6 ರಂದು ಕಾಣೆಯಾದವರ ಬಗ್ಗೆ ಪ್ರಕಟಣೆ
Posted date: 21 Sun, Jul 2019 10:41:05 AM

 ಬಿಲ್ವ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ನವೀನ್ ಅವರು ನಿರ್ಮಿಸುತ್ತಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ‘ ಚಿತ್ರದ ಚಿತ್ರೀಕರಣ ಆಗಸ್ಟ್ 6 ರಿಂದ ಆರಂಭವಾಗಲಿದೆ. ನಿರ್ಮಾಪಕರಿಗೆ ಇದು ಚೊಚ್ಚಲ ನಿರ್ಮಾಣದ ಚಿತ್ರ.

ಈ ಹಿಂದೆ `ಶಕ್ತಿ`, `ದಿಲ್‌ವಾಲ`,`ಕೃಷ್ಣ ರುಕ್ಕು`, `ರ‍್ಯಾಂಬೋ 2` `ಕಿರಾತಕ 2`, ದಾರಿ ತಪ್ಪಿದ ಮಗ`ಸೇರಿದಂತೆ ಆರು ಚಿತ್ರಗಳ ನಿರ್ದೇಶಕರಾಗಿರುವ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಏಳನೇ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅನಿಲ್ ಕುಮಾರ್ ಅವರೆ ಬರೆದಿದ್ದಾರೆ.

65 ವರ್ಷ ಮೇಲ್ಪಟವರ (ಹಿರಿಯ ನಾಗರಿಕರ) ಬಗ್ಗೆಗಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ ಅಭಿನಯಿಸುತ್ತಿದ್ದಾರೆ.  ಬ್ಯಾಂಕಾಕ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶಿವಕುಮಾರ್ ಬಿ.ಕೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಗಸ್ಟ್ 6 ರಂದು ಕಾಣೆಯಾದವರ ಬಗ್ಗೆ ಪ್ರಕಟಣೆ - Chitratara.com
Copyright 2009 chitratara.com Reproduction is forbidden unless authorized. All rights reserved.