Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆರ್.ಕೆ. ಫಿಲಂ ಅಂಡ್ ಟಿ.ವಿ ಇನ್ಸ್‌ಟಿಟ್ಯೂಟ್ ಆರಂಭ
Posted date: 11 Sat, Nov 2017 09:56:10 AM
ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರಾದ ರಾಜ್‌ಕಮಲ್ (ಚಂದ್ರಮೋಹನ್) ಅವರು ಈಗ ತಮ್ಮದೇ ಆದ "ಆರ್.ಕೆ.ಫಿಲಂ ಅಂಡ್ ಟಿ.ವಿ ಇನ್ಸ್‌ಟಿಟ್ಯೂಟ್" ಆರಂಭಿಸಿದ್ದಾರೆ. ಈ ಮೂಲಕ ಸಿನಿಮಾ ಮತ್ತು ಕಿರುತೆರೆಯಲ್ಲಿ ಅಭಿನಯಿಸಲು ಮತ್ತು ನೃತ್ಯ ಮಾಡಲು ಆಸಕ್ತಿ ಇರುವ ಪ್ರತಿಭಾವಂತರಿಗೆ ಅಭಿನಯ ಮತ್ತು ನೃತ್ಯ ತರಬೇತಿ ನೀಡುತ್ತಿದ್ದಾರೆ ಮತ್ತು ಇಲ್ಲಿಗೆ ಬರುವ ಹೊಸ ಪ್ರತಿಭೆಗಳಿಗೆ ಚಲನಚಿತ್ರಗಳಲ್ಲಿ ಅಭಿನಯಿಸಲು ಸೂಕ್ತ ಅವಕಾಶವನ್ನೂ ಕಲ್ಪಿಸಲಿದ್ದಾರೆ.
ಇತ್ತೀಚೆಗಷ್ಟೇ ತಮ್ಮದೇ "ಸ್ಪಿನ್ನರ‍್ಸ್ ಡ್ಯಾನ್ಸ್ ಸ್ಟುಡಿಯೋ"ದಲ್ಲಿ ಉದ್ಘಾಟನೆಯಾದ ಈ ಅಭಿನಯ ತರಬೇತಿ ಕೇಂದ್ರಕ್ಕೆ ಮಾಜಿ ಶಾಸಕರು ಮತ್ತು ನಟರಾದ ನೆ.ಲ ನರೇಂದ್ರಬಾಬು, ರಾಜಾಜಿನಗರ ಕಾರ್ಪೊರೇಟರ್ ಕೃಷ್ಣಮೂರ್ತಿ ಅವರು ಸೇರಿದಂತೆ ಹಲವಾರು ಚಲನಚಿತ್ರ ನಿರ್ದೇಶಕರು, ಚಲನಚಿತ್ರ ನೃತ್ಯ ನಿರ್ದೇಶಕರು ಆಗಮಿಸಿ ರಾಜ್‌ಕಮಲ್ ಅವರ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದ್ದರು. 
ಇಲ್ಲಿ ಅನುಭವಿ ಚಲನಚಿತ್ರ ನಿರ್ದೇಶಕರು ಮತ್ತು ನೃತ್ಯ ನಿರ್ದೇಶಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಇದೀಗ ಒಂದು ತಿಂಗಳ ವಿಶೇಷ ತರಬೇತಿ ಶಿಬಿರವು ನಡೆಯಲಿದ್ದು ಆನಂತರವೂ ಸತತವಾಗಿ ಅಭಿನಯ ತರಬೇತಿ ಮುಂದುವರೆಯುತ್ತದೆ ಎಂದು ಸಂಸ್ಥೆಯ ನಿರ್ದೇಶಕರಾದ ರಾಜ್‌ಕಮಲ್ ಅವರು ತಿಳಿಸಿದ್ದಾರೆ. 
ಆಸಕ್ತರು ಸಂಪರ್ಕಿಸಿ: ಮೊಬೈಲ್ ಸಂಖ್ಯೆ ೯೮೪೫೦೦೨೭೫೯  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆರ್.ಕೆ. ಫಿಲಂ ಅಂಡ್ ಟಿ.ವಿ ಇನ್ಸ್‌ಟಿಟ್ಯೂಟ್ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.