Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇಂದಿನಿಂದ ಅಖಾಡಕ್ಕೆ `ಪೈಲ್ವಾನ್`
Posted date: 12 Thu, Sep 2019 – 08:45:50 AM

ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಸ್ವಪ್ನ ಕೃಷ್ಣ ಅವರು ನಿರ್ಮಿಸಿರುವ, ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷಿತ ‘ಪೈಲ್ವಾನ್‘ ಚಿತ್ರ ಇಂದಿನಿಂದ ಬಿಡುಗಡೆಯಾಗುತ್ತಿದೆ. ಎಸ್.ದೇವರಾಜ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣ, ಡಿ.ಎಸ್.ಕಣ್ಣನ್ ಹಾಗೂ ಜೆ.ವಿ.ಮಧುಕಿರಣ್ ಚಿತ್ರಕಥೆ ಬರೆದಿದ್ದಾರೆ. ಕೃಷ್ಣ ಹಾಗೂ ಡಿ.ಎಸ್.ಕಣ್ಣನ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕರುಣಾಕರ್ ಅವರ ಛಾಯಾಗ್ರಹಣವಿದೆ. ರುಬೆನ್ ಸಂಕಲನ, ಗಣೇಶ್ ಆಚಾರ್ಯ, ರಾಜು ಸುಂದರಂ, ಹರ್ಷ ನೃತ್ಯ ನಿರ್ದೇಶನ ಹಗೂ ರಾಮ್ - ಲಕ್ಷ್ಮಣ್, ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

larnell Stovall ಬಾಕ್ಸಿಂಗ್ ಹಾಗೂ ಎ.ವಿಜಯ್ ಅವರು ಕುಸ್ತಿ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಕಿಚ್ಚ ಸುದೀಪ, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್, ಅಪ್ಪಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇಂದಿನಿಂದ ಅಖಾಡಕ್ಕೆ `ಪೈಲ್ವಾನ್` - Chitratara.com
Copyright 2009 chitratara.com Reproduction is forbidden unless authorized. All rights reserved.