Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ ಕರಾಲಿ + ಬಿಡುಗಡೆ
Posted date: 17 Wed, May 2017 09:31:18 AM

ಕನ್ನಡದಲ್ಲಿ ವಿನೂತನ ಯೋಚನೆಗಳನ್ನು ಹೊತ್ತ ಯುವಕರು ಬಂದು ಗೆಲುವು ಸಾಧಿಸುತ್ತಾ ಇರುವ ಕಾಲದಲ್ಲಿ ಈಗ ಮತ್ತೊಂದು ಚಿತ್ರ ‘ಕರಾಲಿ + ಈ ವಾರ ತೆರೆಗೆ ಆಗಮಿಸುತ್ತಿದೆ.
 
ಈ ಚಿತ್ರದ ಶೀರ್ಷಿಕೆಯ ಕೆಳಗೆ ‘ಮರಣದ ಮರಣವು ಅಂತ ರಾಷ್ಟ್ರಕವಿ ಕುವೆಂಪು ಅವರ ಗೀತೆ ‘ತನುವು ನಿನ್ನದು ಮನವು ನಿನ್ನದು.... ಸಾಲಿನಲ್ಲಿ ಬರುವ ಪದಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ದಕ್ಷಿಣ ಮೂರ್ತಿ ಅವರು. ಈ ಚಿತ್ರದಲ್ಲಿ + ಅನ್ನುವ ಚಿನ್ಹೆ ವೈಧ್ಯಕಿಯ ವೃತ್ತಿಗೆ ಸಂಬಂಧ ಪಡುವಂಥಾದ್ದು. ಈ ಚಿತ್ರದ ಕಥಾ ನಾಯಕಿ ವೈಧ್ಯಕಿಯ ವಿದ್ಯಾರ್ಥಿ.
 
‘ಕರಾಲಿ + ಒಂದು ಒಂದು ನಿಗೂಢವಾದ ವಿಚಾರವನ್ನು ಹೊತ್ತು ಕ್ಷಣ ಕ್ಷಣಕ್ಕೂ ಥ್ರಿಲ್ ನೀಡುತ್ತದೆ. ಇಲ್ಲಿ ಒಂದು ಹೆಣ್ಣು ಬೊಂಬೆ ಸಹ ಮುಖ್ಯ ಪಾತ್ರ ವಹಿಸುತ್ತಿದೆ. ಇದು ಆತ್ಮ ಹಾಗೂ ಪರಮಾತ್ಮದ ನಡುವಿನ ಅಂತರ ಸಹ ಅನ್ನಬಹುದು. ಕಳೆದು ಹೋದ ಪ್ರೀತಿಯನ್ನು ಪಡೆಯುವುದರ ಬಗ್ಗೆ ಒಂದು ಹೆಣ್ಣು ತೆಗೆದು ಕೊಳ್ಳುವ ನಿರ್ಧಾರ ಚಿತ್ರಕಥೆಯಲ್ಲಿ ಸಾಗುತ್ತದೆ. ಇಲ್ಲಿ ಕೇವಲ ಎರಡು ಹಾಡುಗಳು ಮಾತ್ರ ಇದೆ. ನಿರ್ದೇಶಕ ದಕ್ಷಿಣ ಮೂರ್ತಿ ಅವರು ಕಿರುತೆರೆಯಲ್ಲಿ ಹಲವು ಧಾರವಾಹಿಗಳಿಗೆ ಬರಹಗಾರರು.
 
ಕರಾವಳಿ ಪ್ರದೇಶದ ಹುಡುಗ ಸಾಹಿಲ್ ರೈ ಈ ಚಿತ್ರದ ಕಥಾ ನಾಯಕ. ವಿಕಾಸ್ ಸಹ ಒಂದು ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.
 
ಆರ್ಯಮಾನ್ ಸಂಗೀತ, ಪವನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ ಕರಾಲಿ + ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.