Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ನೀಲಿಕಣ್ಣುಗಳ ಕಥಾನಕ ಬ್ಲೂ ಐಸ್ ಬಿಡುಗಡೆ
Posted date: 19 Tue, Dec 2017 10:22:58 AM
ಇತ್ತೀಚಿನ ದಿನಗಳಲ್ಲಿ ಕನ್ನಡ ಪ್ರೇಕ್ಷಕರು ಫ್ಯಾಮಿಲಿ ಲವ್ ಸ್ಟೋರಿ ಚಿತ್ರಗಳಿಗಿಂತಾ ಹಾರರ್, ಥ್ರಿಲ್ಲರ್ ಚಿತ್ರಗಳನ್ನೇ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಅದೇ ಪ್ರಾಕಾರದ ಚಿತ್ರಗಳನ್ನು ನಿರ್ಮಿಸುವವರೂ ಹೆಚ್ಚಾಗಿದ್ದಾರೆ. ಈ ಹಿಂದೆ ರೆಡ್ ಎನ್ನುವ ವಿನೂತನ ಚಿತ್ರವನ್ನು ನಿರ್ಮಿಸಿರುವ ರಾಜೇಶ್ ಮೂರ್ತಿ ಈಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೇ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಬ್ಲೂ ಐಸ್ ಚಿತ್ರವು ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲತ್ ಕಥಾನಕವಾಗಿದ್ದು, ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿವೆ. ಅಫ್ರಿನ್ ಸಿದ್ದು, ನಾಶಾಂತ್, ರಾಜೇಶ್, ಪೃಥ್ವಿ ಹಾಗೂ ನಾಸಿಯಾ ರಾಯ್ ಆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೆಡ್ ಚಿತ್ರಗಳಲ್ಲಿ ಪತಿ ಪತ್ನಿಯ ನಡುವಿನ ಸಂಬಂಧಗಳನ್ನು ಏರೋಟಿಕ್ ಥ್ರಿಲ್ಲರ್ ಶೈಲಿಯಲ್ಲಿ ನಿರೂಪಿಸಿದ್ದ ನಿರ್ದೇಶಕ ರಾಜೇಶ್ ಮೂರ್ತಿ ಈಗ ಬ್ಲೂ ಐಸ್ ಚಿತ್ರದ ಮೂಲಕ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರವನ್ನು ತೆರೆಯ ಮೇಲೆ ತರುತ್ತಿದ್ದಾರೆ. ಅಡಲ್ಟ್ ಕಂಟೆಂಟ್ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ರಾಜೇಶ್ ಮೂರ್ತಿ ಅವರು ಮನುಷ್ಯರ ನಡುವಿನ ಸಂಬಂಧಗಳ ಸುತ್ತ ಕಥಾ ಹಂದರ ರಚಿಸಿದ್ದಾರೆ. ವಿನೋದ್ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ರಾಜೇಶ್ ಮೂರ್ತಿ ಅವರೇ ನಿಭಾಯಿಸಿದ್ದಾರೆ. ರಾಖಿ ಎಂ ಅವರ ಸಾಹಿತ್ಯವಿರುವ ಈ ಚಿತ್ರಕ್ಕೆ ರಾಜೇಶ್ ಮೂರ್ತಿ ಹಿನ್ನೆಲೆ ಸಂಗೀತ ಮಾಡಿದ್ದಾರೆ. ಸತೀಶ್ ಸಂಕಲನವಿದ್ದು, ರಾಜೇಶ್ ಮೂರ್ತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ನೀಲಿಕಣ್ಣುಗಳ ಕಥಾನಕ ಬ್ಲೂ ಐಸ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.