Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವೀಕೆಂಡ್ ನಲ್ಲಿ ಜೀ಼ ಕನ್ನಡ ತರುತ್ತಿದೆ, ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ
Posted date: 22 Fri, May 2020 09:10:36 PM

ಜೀ಼ ಕನ್ನಡ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ. ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5 ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ. ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಕೇವಲ 19 ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ.

 

ಜೀ಼ ಕನ್ನಡ “ಬಯಸಿದ ಬಾಗಿಲು ತೆಗೆಯೋಣ” ಎಂಬ ಘೋಷವಾಕ್ಯದ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ. ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿಥ್ ರಮೇಶ್ ಇತ್ಯಾದಿ ಅಸಂಖ್ಯ ರಿಯಾಲಿಟಿ ಶೋಗಳು ಜೀ಼ ಕನ್ನಡ ವಾಹಿನಿಯನ್ನು ಕನ್ನಡಿಗರ ಮನೆ ಮನೆ ಮಾತಾಗಿಸಿವೆ. ಜೀ಼ ಕನ್ನಡ ರೂಪಿಸಿದ ಪ್ರತಿ ಕಾರ್ಯಕ್ರಮವೂ ಜನಪ್ರಿಯವಾಗಿರುವುದೇ ಅಲ್ಲದೆ ವೀಕ್ಷಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿರುವುದು ಹೆಗ್ಗಳಿಕೆ.

ಕನ್ನಡದ ಮುಂಚೂಣಿಯ ಮನರಂಜನೆಯ ವಾಹಿನಿ ಜೀ಼ ಕನ್ನಡ ಈ ವಾರಾಂತ್ಯಕ್ಕೆ ಮೂರು ಮಹತ್ತರ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ. 

ಈ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿರುವ ನಿಮ್ಮ ನೆಚ್ಚಿನ ತಾರೆಯರ `ಲಾಕ್ ಡೌನ್ ಡೈರೀಸ್’ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಿದ್ಧಪಡಿಸಲಾಗಿದೆ. ಜನಪ್ರಿಯ ತಾರೆಯರು ತಮ್ಮ ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ನೀಡುತ್ತದೆ. 

 

ಸರಿಗಮಪ ಕಾರ್ಯಕ್ರಮದ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಂದ ವಿನೂತನ ಕಾರ್ಯಕ್ರಮ,`ಕಾಫಿ ವಿಥ್ ಅನು’ ಜೀ಼ ಕನ್ನಡ ಮತ್ತೊಂದು ಆಕರ್ಷಣೆಯಾಗಿದ್ದು ಅನುಶ್ರೀ ಅವರು ಖ್ಯಾತನಾಮರೊಂದಿಗೆ ತರಲೆ, ಹಾಸ್ಯ, ಮಾತುಕತೆ ಮಾಡಿ ನಿಮಗೆ ನಿಮ್ಮ ತಾರೆಯರ ಕಾಣದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಕನ್ನಡ ಕಿರುತೆರೆಯಲ್ಲಿಯೇ ವಿನೂತನ ಪರಿಕಲ್ಪನೆಯಾಗಿದ್ದು ವೀಕ್ಷಕರನ್ನು ರಂಜಿಸಲಿವೆ. 

 

ಈ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಅನುಶ್ರೀ ಅವರೊಂದಿಗೆ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ‘ಕಾಫಿ ವಿಥ್ ಅನು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

 

ಜೀ಼ ಟಿ.ವಿ.ಯಲ್ಲಿ ಸ ರೆ ಗ ಮ ಪ ಕಾರ್ಯಕ್ರಮದ 25ನೇ ಯಶಸ್ವಿ ವರ್ಷಗಳ ಸಂಭ್ರಮಾಚರಣೆಗೆ ಮೇ 23, 2020ರಂದು ಶನಿವಾರ ಸಂಜೆ 4.30ಕ್ಕೆ 2.5-ಗಂಟೆಗಳ ಲೈವಥಾನ್ ಡಿಜಿಟಲ್ ಮ್ಯೂಸಿಕ್ ಕನ್ಸರ್ಟ್ ಆಯೋಜಿಸಿದೆ. ಈ ನೆಟ್ ವರ್ಕ್ ಸಂಗೀತವನ್ನು ಜನರನ್ನು ಒಗ್ಗೂಡಿಸಲು ಮತ್ತು ಈ ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿಯೇ ರಂಜಿಸಲು ಆಯೋಜಿಸಿದೆ. 

ಭಾನುವಾರ ಸಂಜೆ 7.00 ಗಂಟೆಗೆ `ಒಂದೇ ದೇಶ, ಒಂದೇ ರಾಗ’ಈ ಸಂಗೀತ ಕಾರ್ಯಕ್ರಮದ ಪ್ರಸಾರ ಜೀ಼ ಕನ್ನಡದಲ್ಲಿ ವೀಕ್ಷಕರನ್ನು ರಂಜಿಸಲಿದೆ. 

 

ಜೀ಼ ಕನ್ನಡದಲ್ಲಿ ಸರಿಗಮಪ ಹಲವು ಸೀಸನ್ ಗಳಲ್ಲಿ ಕನ್ನಡ ವೀಕ್ಷಕರನ್ನು ರಂಜಿಸಿರುವುದಲ್ಲದೆ ಹಲವು ಉದಯೋನ್ಮುಖ ಗಾಯಕ, ಗಾಯಕಿಯರಿಗೆ ವೇದಿಕೆ ಒದಗಿಸಿ ಅವರು ಗಾಯಕರಾಗಿ ವೃತ್ತಿಜೀವನಕ್ಕೆ ಪ್ರವೇಶ ಪಡೆಯಲು ನೆರವಾಗಿದೆ. ಸರಿಗಮಪದಿಂದ ಇಂದು ಹಲವು ಸ್ಟಾರ್ ಗಾಯಕರಿಗೆ ವೇದಿಕೆಯಾಗಿದೆ. 

ಲಾಕ್ ಡೌನ್ 4.0 ಕಾಲದಲ್ಲಿ ಈ ಡಿಜಿಟಲ್ ಕನ್ಸರ್ಟ್ ಭಾರತವನ್ನು ಕೋವಿಡ್-19ರ ವಿರುದ್ಧ ಹೋರಾಡಲು ಒಗ್ಗೂಡಿಸಲು ಸ್ಫೂರ್ತಿ ತುಂಬಲಿದೆ. ಈ ಸಂಗೀತ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರನ್ನು ಒಟ್ಟುಗೂಡಿಸಲಿದ್ದು 10 ಜೀ಼ ಫೇಸ್ ಬುಕ್ ಪುಟಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಮಾಡಲಿದ್ದಾರೆ.

 

ಲಾಕ್ ಡೌನ್ ಟೈಮಲ್ಲಿ ಮ್ಯೂಟ್ ಡೌನ್ ಆಗಿರುವ ನಿಮಗಾಗಿ ನಿಮ್ಮ ನೆಚ್ಚನ ತಾರೆಯರ ಹೊಸ ಪ್ರಯತ್ನ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಸ ರೆ ಗ ಮ ಪ , ಲಾಕ್ ಡೌನ್ ಡೈರೀಸ್ , ಕಾಫಿ ವಿಥ್ ಅನು ನೋಡಿ ಕುಟುಂಬದ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವೀಕೆಂಡ್ ನಲ್ಲಿ ಜೀ಼ ಕನ್ನಡ ತರುತ್ತಿದೆ, ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ - Chitratara.com
Copyright 2009 chitratara.com Reproduction is forbidden unless authorized. All rights reserved.