Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದಯ ಟಿವಿ ಯಲ್ಲಿ ಗಂಧದಗುಡಿ ಸ್ಟಾರ್ ನೈಟ್
Posted date: 12 Thu, Oct 2017 09:18:42 AM
ವಿಶ್ವ ವಿಖ್ಯಾತ ಮೈಸೂರುದಸರಾ ಹಬ್ಬದಂದುಉದಯ ಟಿವಿ ತಂಡ ಮೈಸೂರಿನ ಮಹಾರಾಜ ಅಂಗಳದಲ್ಲಿ ಚಿತ್ರಿಸಿದ ಗಂಧದಗುಡಿ ಸ್ಟಾರ್ ನೈಟ್ ವಿಶೇಷ ಕಾರ್ಯಕ್ರಮಇದೇಅಕ್ಟೋಬರ್ ೧೪ರಂದು ರಾತ್ರಿ ೮ ಗಂಟೆಗೆ ನಿಮ್ಮಉದಯಟಿವಿಯಲ್ಲಿ ಪ್ರಸಾರವಾಗಲಿದೆ.
 
ನಾಡ ಹಬ್ಬದಸರಾಎಂದರೆಎಲ್ಲರಿಗೂ ವಿಶೇಷ. ನಾಡಿನಾದ್ಯಂತದಸರ ಹಬ್ಬವನ್ನು ನಾಡಹಬ್ಬವಾಗಿ ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗಾಗಿ ಯಾವಾಗಲೂ ವಿಶೇಷ ಕಾರ್ಯಕ್ರಮಗಳ ಮೂಲಕ ಜನರನ್ನುರಂಜಿಸುವ, ಭರಪೂರ ಮನರಂಜನೆ ನೀಡುವಉದಯ ಟಿವಿ ಈಗ ಗಂಧದಗುಡಿ ಸ್ಟಾರ್ ನೈಟ್‌ನ ಮನರಂಜನೆಯನ್ನುಬಿತ್ತರಿಸಲಿದೆ.
 
ಈ ಕಾರ್ಯಕ್ರಮದಲ್ಲಿಚಾಲೆಂಜಿಂಗ್ ಸ್ಟಾರ್‌ದರ್ಶನ್, ಸಾಧೂ ಕೋಕಿಲ, ಧೃವಾ ಸರ್ಜಾ, ಚಿರು ಸರ್ಜಾ, ಹರ್ಷಿಕ, ಶರ್ಮಿಳಾ ಮಾಂಡ್ರೆ ಹಾಗೂ ಸೃಜನ್ ಸೇರಿದಂತೆ ಹಲವಾರುಜನ ಭಾಗವಹಿಸಿದ್ದರು. ವೇದಿಕೆಗೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್‌ದರ್ಶನ್‌ತಮ್ಮ ನೂತನತಾರಖ್ ಸಿನಿಮಾದ ಪಂಚ್‌ಡೈಲಾಗ್ ಗಳನ್ನು ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ನಟಧೃವಾ ಸರ್ಜಾತಮ್ಮ ಭರ್ಜರಿಚಿತ್ರದ ಹಾಡಿಗೆಡಾನ್ಸ್ ಮಾಡುವ ಮೂಲಕ ಜನರನ್ನು ರಂಜಿಸಿದರೆ, ಸೃಜನ್ ಲೋಕೇಶ್ ಹಾಗೂ ದರ್ಶನ್ ನಡುವಿನ ಭಾವನಾತ್ಮಕ ಸಂಭಾಷಣೆ ಅಭಿಮಾನಿಗಳನ್ನು ಕಣ್ಣಾಲಿಗಳನ್ನು ತೇವಗೊಳಿಸಿತ್ತು. ಇನ್ನೂಕಾಮಿಡಿಕಿಂಗ್ ಸಾಧೂ ಕೋಕಿಲ ತಮ್ಮ ವಿಶಿಷ್ಟ ಶೈಲಿಯಡೈಲಾಗ್ ಗಳ ಮೂಲಕ ಪ್ರೇಕ್ಷಕರು ಹುಚ್ಚೆದ್ದುಕುಣಿಯುವಂತೆ ಮಾಡಿದರು. ಇದಲ್ಲದೆಇನ್ನೂ ಹಲವು ಕಲಾವಿದರು. ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 
 
ಕಿರುತೆರೆಯ ಯಶಸ್ವಿ ಹಾಗೂ ಜನಪ್ರಿಯ ನಿರೂಪಕಿಯಾದ ಅನುಶ್ರೀ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಅನುಶ್ರೀ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಡುವಲ್ಲಿ ಯಶಸ್ವಿಯಾದರು. ಈ ವಿಶೇಷ ಕಾರ್ಯಕ್ರಮಕ್ಕೆರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅತಿಥಿಯಾಗಿಆಗಮಿಸದ್ದರೆ, ಸುಮಾರು ೪೦ ಸಾವಿರಕ್ಕೂಅಧಿಕ ಪ್ರೇಕ್ಷಕರು ಈ ಕಾರ್ಯಕ್ರಮವನ್ನುಕಣ್ತುಂಬಿಕೊಂಡರು.
 
ಸ್ಯಾಂಡಲ್‌ವುಡ್ ಸ್ಟಾರ್ ನಟ ನಟಿಯರು ಭರಪೂರ ಮನರಂಜನೆ ನೀಡಿದ ಗಂಧದಗುಡಿ ಸ್ಟಾರ್ ನೈಟ್ ಕಾರ್ಯಕ್ರಮಇದೇಅಕ್ಟೋಬರ್ ೧೪ ರಂದುರಾತ್ರಿ ೮ ಗಂಟೆಗೆ ನಿಮ್ಮಉದಯಟಿವಿಯಲ್ಲಿ ಪ್ರಸಾರವಾಗಲಿದೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದಯ ಟಿವಿ ಯಲ್ಲಿ ಗಂಧದಗುಡಿ ಸ್ಟಾರ್ ನೈಟ್ - Chitratara.com
Copyright 2009 chitratara.com Reproduction is forbidden unless authorized. All rights reserved.