ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಅವರ ದ್ವಿತೀಯ ನಿರ್ದೇಶನದ ಚಿತ್ರ ‘ಉಪ್ಪು ಹುಳಿ ಖಾರ’. ಇದೊಂದು ಸಖತ್ತಾದ ರಸಪಾಕ. ಮನರಂಜನೆ ಜೊತೆಗೆ ಮನ ಮುಟ್ಟುವ ವಿಚಾರಗಳನ್ನು ಇಮ್ರಾನ್ ಸರ್ದಾರಿಯ ಸೇರಿಸಿದ್ದಾರೆ. ಇದಕ್ಕೆ ಅವರದೇ ಕಥೆ, ಚಿತ್ರಕಥೆ, ನೃತ್ಯ ನಿರ್ದೇಶನ ಸಹ ಒಳಗೊಂಡಿದೆ.
‘ಉಪ್ಪು ಹುಳಿ ಖಾರ’ ಹಿರಿಯ ನಟಿ, ಕನಸಿನ ರಾಣಿ, ಆಕ್ಷನ್ ಕ್ವೀನ್ ಮಾಲಾಶ್ರೀ, ಮಾತಿಗೆ ಹೆಸರಾದ ಅನುಶ್ರೀ, ಹಾಗೂ ಬಿಗ್ ಬಾಸ್‌ನಲ್ಲಿ ಕಾಣಿಸಿದ ಜಯಶ್ರೀ ಅವರ ಜೊತೆ ಶರತ್, ಶಶಿ, ಧನಂಜಯ (ನೃತ್ಯ ನಿರ್ದೇಶಕ ಧನು), ಅಪರೂಪ್ ಅಭಿನಯದ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅದ್ಧೂರಿ ಚಿತ್ರಕ್ಕೆ ದೇಶ ವಿದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ಎಂ ರಮೇಶ್ ರೆಡ್ಡಿ (ನಂಗ್ಲಿ) ತೇಜಸ್ವಿನಿ ಎಂಟೆರ್ಪ್ರೈಸಸ್ ಬ್ಯಾನ್ನರ್ ಅಡಿಯಲ್ಲಿ ತಯಾರಿಸಿದ್ದಾರೆ.
ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ಹಾಗೂ ಸಾಧು ಕೋಕಿಲ ಒಂದೊಂದು ಗೀತೆಯನ್ನು ಹಾಡಿದ್ದಾರೆ.
ಎ ಪಿ ಅರ್ಜುನ್ ಅವರ ಸಂಭಾಷಣೆ ಇರುವ ಈ ‘ಉಪ್ಪು ಹುಳಿ ಖಾರ’ ನಾಲ್ವರು ಸಂಗೀತ ನಿರ್ದೇಶಕರುಗಳು - ಶಷಾಂಕ್ ಶೇಷಗಿರಿ, ಜುಡಾ ಸ್ಯಾಂಡಿ, ಪ್ರಜ್ವಲ್ ಪೈ ಹಾಗೂ ಕಿಶೋರ್ ಅಕ್ಸ ರಾಗ ಸಂಯೋಜನೆ ಮಾಡಿರುವವರು.
ನ್ಯೂ ಯಾರ್ಕ್ ಭಾಗದ ಚಿತ್ರೀಕರಣವನ್ನು ಲಾನ್ಸ್ ಕೆಪ್ಲನ್ ಛಾಯಾಗ್ರಹಣ ಮಾಡಿದರೆ, ನಿರಂಜನ್ ಬಾಬು ಬಹುತೇಕ ಛಾಯಾಗ್ರಹಣ ಮಾಡಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ, ಶಿವಕುಮಾರ್ ಕಲೆ, ಡಿಫರೆಂಟ್ ಡ್ಯಾನಿ, ಜಾಲಿ ಬ್ಯಾಸ್ಟಿನ್,ಮಾಸ್ ಮಾದ ಸಾಹಸ, ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ, ಯೋಗರಾಜ್ ಭಟ್, ಡಾ ವಿ ನಾಗೇಂದ್ರ ಪ್ರಸಾದ್, ಘೌಸ್ ಪೀರ್, ಎಸ್ ಸ್ವಾಮಿ ಗೀತ ರಚನೆ ಮಾಡಿದ್ದಾರೆ.