Chief Editor
Manohar. R (Manu)
Photo Journalist
chitrataramanu@gmail.com
+91 9845549026
ಏಪ್ರಿಲ್‌ನ ಹಿಮ ಬಿಂದು
Posted date: 28 Thu, Sep 2017 08:47:32 AM
ತನ್ನ ಶೀರ್ಷಿಕೆಯೂ ಸೇರಿದಂತೆ ನಾನಾ ರೀತಿಯಲ್ಲಿ ಕುತೂಹಲ ಹುಟ್ಟಿಸಿರುವ ಶಿವ ಜಗನ್ ನಿರ್ದೇಶನದ ಏಪ್ರಿಲ್‌ನ ಹಿಮಬಿಂದು ಚಿತ್ರ ಅಕ್ಟೋಬರ್ ೬ರಂದು ರಾಜ್ಯಾಧ್ಯಂತ ತೆರೆ ಕಾಣಲಿದೆ.
ಹಿರಿಯ ನಟ ದತ್ತಣ್ಣ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದ ಹಾಡುಗಳು ಈಗಾಗಲೇ ಹೊಸಾ ಥರದ ಅನುಭೂತಿಯ ಅಲೆ ಎಬ್ಬಿಸಿದೆ. ಇದರ ಜೊತೆ ಜೊತೆಗೇ ಈ ಚಿತ್ರ ನವಿರಾದೊಂದು ಕಾಡುವ ಕಥಾ ಎಳೆ ಹೊಂದಿದೆ ಎಂಬ ವಿಚಾರವೂ ಜಾಹೀರುಗೊಂಡಿದೆ. ಅಂದಹಾಗೆ ನಿರ್ದೇಶಕ ಶಿವ ಮತ್ತು ಜಗನ್ ಬದುಕಿನಲ್ಲಿ ಕಂಡ ಮತ್ತು ಖುದ್ದಾಗಿ ಅನುಭವಿಸಿದ ಘಟನಾವಳಿಗಳನ್ನಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಿದ್ದಾರಂತೆ.
ಶಿವು ಜಗನ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಭರತ್ ಸಂಗೀತ ನಿರ್ದೇಶನ ಇದೆ. ದತ್ತಣ್ಣ, ಶ್ರೀಧರ್, ಬಾಬು ಹಿರಣ್ಣಯ್ಯ, ದತ್ತಣ್ಣನ ಸಹೋದರ ಸೋಮಶೇಖರ ರಾವ್, ಸಚಿನ್, ಗಣೇಶ್, ಮುತ್ತಣ್ಣ, ಚಿದಾನಂದ, ಚಂದನಾ, ಶ್ವೇತಾ, ಸ್ಪಂದನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಏಪ್ರಿಲ್‌ನ ಹಿಮ ಬಿಂದು - Chitratara.com
Copyright 2009 chitratara.com Reproduction is forbidden unless authorized. All rights reserved.