Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನಕ ಚಿತ್ರದಲ್ಲಿ ನಿರ್ದೇಶಕ ಯುಗ ಚಂದ್ರು ರಗಡ್ ಲುಕ್!
Posted date: 03 Thu, Aug 2017 08:41:03 AM
ತಾಜ್‌ಮಹಲ್ ಚಂದ್ರು ನಿರ್ದೇಶನದ ‘ಕನಕ ಚಿತ್ರ ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಲೇ ಇದೆ. ಇದರ ನಾಯಕ ದುನಿಯಾ ವಿಜಯ್ ಕೂಡಾ ಚಿತ್ರಕ್ಕೆ ಪೂರಕವಾಗಿ ರಿಸ್ಕೀ ಸ್ಟಂಟ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂಥಾ ಚಿತ್ರದಲ್ಲಿ ರವಿಶಂಕರ್ ವಿಲನ್ ಪಾತ್ರ ನಿರ್ವಹಿಸುತ್ತಿರೋದು ಗೊತ್ತಿರೋ ವಿಚಾರವೆ. ಆದರೆ ರವಿಶಂಕರ್ ಜೊತೆಗೇ ಮತ್ತೋರ್ವ ರಗಡ್ ವಿಲನ್ ಕೂಡಾ ಕನಕ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.
ಅವರು ಯುಗ ಚಂದ್ರು..!

ಇದುವರೆಗೂ ನಾನಾ ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿ, ಸ್ವತಂತ್ರ ನಿರ್ದೇಶಕರೂ ಆಗಿ ಗಮನ ಸೆಳೆದಿರುವವರು ಚಂದ್ರು. ಅವರು ಕನಕ ಚಿತ್ರದ ಮೂಲಕ ವಿಲನ್ ಆಗಿ ಬಣ್ಣ ಹಚ್ಚಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕನಕ ಚಿತ್ರದಲ್ಲಿ ರವಿಶಂಕರ್ ಒಂದೂರಿನ ಮುಖ್ಯಸ್ಥನ ಪಾತ್ರ ಮಾಡುತ್ತಿದ್ದಾರೆ. ಅದು ಎಂದಿನಂತೆಯೇ ಭಾರೀ ಖದರ್ ಇರೋ ಪಾತ್ರ. ಇಲ್ಲಿ ರವಿಶಂಕರ್ ಅವರ ತಮ್ಮನ ಪಾತ್ರವೊಂದಕ್ಕೆ ಅಂಥಾದ್ದೇ ರಗಡ್ ಲುಕ್ಕಿರೋ ವಿಲನ್ ಒಬ್ಬರು ಬೇಕಾಗಿದ್ದರು. ಈ ಬಗ್ಗೆ ಚಿತ್ರ ತಂಡ ಬೇರೆ ಲೆಕ್ಕಾಚಾರದಲ್ಲಿರುವಾಗಲೇ ನಿರ್ದೇಶಕ ಚಂದ್ರು ಬೇರೆಯದ್ದೇ ಯೋಜನೆ ಹಾಕಿಕೊಂಡಿದ್ದರು. ಕನಕ ಚಿತ್ರದ ಚಿತ್ರಕಥೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದ ಚಂದ್ರು ಅವರನ್ನೇ ಚಂದ್ರು ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿ ಬಿಟ್ಟಿದ್ದರು!
ಹಾಗಂತ ಚಂದ್ರು ಯುಗ ಚಂದ್ರು ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದಕ್ಕೂ ಕಾರಣಗಳಿವೆ. ಈ ಚಂದ್ರು ಅವರದ್ದು ಸದರಿ ವಿಲನ್ ಪಾತ್ರಕ್ಕೆ ಸೂಟ್ ಆಗುವಂಥಾದ್ದೇ ರಗಡ್ ಲುಕ್ ಇದೆ. ಅದಲ್ಲದೇ ಈ ಹಿಂದೆ ತಾವು ಮಾಡಿದ್ದ ಚಿತ್ರಗಳಲ್ಲೆಲ್ಲ ಯುಗ ಚಂದ್ರು ಸಣ್ಣಪುಟ್ಟ ಪಾತ್ರ ಮಾಡುತ್ತಾ ಗಮನ ಸೆಳೆದಿದ್ದರು. ಅದುವೇ ಈಗ ಅವರನ್ನು ಮುಖ್ಯ ವಿಲನ್ ಆಗಿ ಹೊರ ಹೊಮ್ಮುವಂತೆ ಮಾಡಿದೆ.

ಕನ್ನಡದ ಖ್ಯಾತ ನಿರ್ದೇಶಕರ ಬಳಿಯೆಲ್ಲ ಕಾರ್ಯ ನಿರ್ವಹಿಸಿ ನಿರ್ದೇಶನವನ್ನೇ ಪ್ರಧಾನವಾಗಿ ತೆಗೆದುಕೊಂಡಿದ್ದವರು ಯುಗ ಚಂದ್ರು. ಅರ್ಥ, ಮಣಿ ಮುಂತಾದ ಚಿತ್ರಗಳಲ್ಲಿ ಯೋಗರಾಜ ಭಟ್ಟರ ಜೊತೆ ಕೆಲಸ ಮಾಡಿದ್ದ ಚಂದ್ರು, ಸಾಧು ಕೋಕಿಲಾ, ಸಾಯಿ ಪ್ರಕಾಶ್ ಸೇರಿದಂತೆ ಬಹುತೇಕ ನಿರ್ದೇಶಕರ ಗರಡಿಯಲ್ಲಿ ಪಳಗಿದ್ದಾರೆ. ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲೂ ಯುಗ ಚಂದ್ರು ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ತೆಲುಗು ನಿರ್ದೇಶಕ ಅರುಣ್ ಮುಂತಾದವರ ಜೊತೆಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಾವೇ ಯುಗ ಮತ್ತು ಗೋವಾ ಎಂಬ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. 

ಈ ಚಿತ್ರದಲ್ಲವರು ಮೊದಲ ಸಲ ಭಾರೀ ಪ್ರಾಧಾನ್ಯತೆ ಇರೋ ವಿಲನ್ ಪಾತ್ರ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಈ ಪಾತ್ರಕ್ಕೊಂದು ಮಹತ್ವ ಇದೆಯಂತೆ. ಡೈಲಾಗ್ ಡೆಲಿವರಿ ಸೇರಿದಂತೆ ಪ್ರತಿಯೊಂದರಲ್ಲಿಯೂ ಚಂದ್ರು ಅಚ್ಚರಿ ಹುಟ್ಟಿಸಿದ್ದಾರೆ. ನಿರ್ದೇಶಕರು ಮತ್ತು ಟೀಮಿನ ಶಹಬ್ಬಾಸ್‌ಗಿರಿಯಿಂದ ಉತ್ತೇಜಿತರಾಗಿರೋ ಚಂದ್ರು, ಮುಂದಿನ ಇನಗಳಲ್ಲಿ ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿಯೇ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನಕ ಚಿತ್ರದಲ್ಲಿ ನಿರ್ದೇಶಕ ಯುಗ ಚಂದ್ರು ರಗಡ್ ಲುಕ್! - Chitratara.com
Copyright 2009 chitratara.com Reproduction is forbidden unless authorized. All rights reserved.