Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡ ಸಿನಿಮಾ ಕಾಫಿ ತೋಟ ವಿಮರ್ಶೆ
Posted date: 19 Sat, Aug 2017 09:13:49 AM
ಚಿತ್ರ – ಕಾಫಿ ತೋಟ, ನಿರ್ಮಾಪಕರು – ಮನ್ವಂತರ ಫಿಲ್ಮ್ಸ್ 29 ವ್ಯಕ್ತಿಗಳು, ನಿರ್ದೇಶನ – ಟಿ ಎನ್ ಸೀತಾರಾಂ, ಛಾಯಾಗ್ರಹಣ – ಅಶೋಕ್ ಕಶ್ಯಪ್, ಸಂಗೀತ – ಅನೂಪ್ ಸೀಳಿನ್ ಹಾಗೂ ಮಿದುನ್ ಮುಕುಂದನ್, ತಾರಾಗಣ – ರಾಧಿಕ ಚೇತನ್, ರಾಹುಲ್ ಮಾಧವ, ರಘು ಮುಖರ್ಜಿ, ವೀಣಾ ಸುಂದರ್, ಸುಂದರ್ ರಾಜ್, ಬೇಬಿ ಅಮೋಘ, ಸಂಯುಕ್ತ ಹೊರನಾಡು, ಸಂಯುಕ್ತ ಬೆಳವಾಡಿ, ಹನುಮಂತೆ ಗೌಡ, ಟಿ ಎನ್ ಸೀತಾರಾಂ, ವಿಶೇಷ ಪಾತ್ರದಲ್ಲಿ ಅಂಬಿಕ, ವೈ ಕೆ ಮುದ್ದುಕೃಷ್ಣ, ಬಿ ಸಿ ಪಾಟೀಲ್, ಶಿವಶಂಕರ್, ಯು ಬಿ ಗೀತಾ, ಕೃಷ್ಣ ನಾಡಿಗ್ ಹಾಗೂ ಇತರರು.

ಆಯಾ ತಪ್ಪಿದ ಸೀತಾರಾಂ ತೋಟ ಹಿನ್ನೋಟ!

ಬಹು ನಿರೀಕ್ಷಿತ ಕನ್ನಡ ಚಿತ್ರ ‘ಕಾಫಿ ತೋಟ’ ಒಂದಲ್ಲ ಎರಡು ಕೊಲೆಗಳ ಬಗ್ಗೆ ಗುಮಾನಿ ಹುಟ್ಟು ಹಾಕುತ್ತಾ, ಮೂರು ರಾಧಿಕ ಚೇತನ್ ನಮ್ಮ ಕಣ್ಣ ಮುಂದೆ ಬರುತ್ತಾರೆ. ಟಿ ಎನ್ ಸೀತಾರಾಂ ಅವರ ನೆಚ್ಚಿನ ಕೋರ್ಟ್ ಹಾಲ್ ಇಲ್ಲಿ ಅಷ್ಟೊಂದು ಮಜಾ ಕೊಟ್ಟಿಲ್ಲ, ಅವರ ನಿರೂಪಣೆಯಲ್ಲೂ ಸಹ ನರಳಿದ್ದಾರೆ. ಎಲ್ಲೋ ಇದ್ದ ಸನ್ನಿವೇಶ ಮತ್ತೆಲ್ಲೋ ಕಡೆ ಕರೆದುಕೊಂಡು ಹೋಗಿ ಪೇಲವ ಅಂತಲೂ ಅನ್ನಿಸಿಬಿಡುತ್ತದೆ. ಒಂದು ಕನೆಕ್ಷನ್ ಅಂತ ಏನು ಹೇಳುತ್ತೇವೆ ಇಲ್ಲದೆ ಮುಗ್ಗರಿಸಿ ಸೀತಾರಾಂ ಸಿನಿಮಾ ವ್ಯಾಖ್ಯಾನ ಇಷ್ಟೇಯ ಎಂದು ಮುಜುಗರ ಮನಸ್ಸಿಗೆ ಆಗುತ್ತದೆ. ಅವರ ಹಿನ್ನೋಟ ಇಲ್ಲ ಜಾಸ್ತಿ. ಅಂದರೆ ಫ್ಲಶ್ ಬ್ಯಾಕ್. ‘ಸಿ ಐ ಡಿ’ ಧಾರಾವಾಹಿ ಸೋನಿ ಟಿ ವಿ ಯಲ್ಲಿ ನೋಡಿದವರಿಗೆ ಚಪ್ಪರಿಸುವಂತಹುದು ಏನಿಲ್ಲ. ಇದಕ್ಕಪ್ಪನಂತಹ ಕೇಸ್ ಬಂದು ಹೋಗಿದೆ. ಸೀತಾರಾಂ ಜೊತೆಗಾರರಾದ ಮುದ್ದುಕೃಷ್ಣ, ಸೋಮಶೇಖರ್, ಯು ಬಿ ಗೀತಾ ಸನ್ನಿವೇಶಗಳಲ್ಲಿ ಬಂದು ಹೋಗುತ್ತಾರೆ. ಅದೆಲ್ಲವೂ ಅಂತಹ ಪ್ರಯೋಜನ ಏನು ಆಗಿಲ್ಲ. ಮಧುರಯಕ್ಕೆ ಮುಕ್ಕಿಲ್ಲ, ಕಣ್ಣಿಗೆ ಹಬ್ಬವಂತು ಮಿಸ್ ಆಗಿಲ್ಲ, ಮನಸ್ಸಿಗೆ ನಿಲ್ಲುವಂತೆ ಇನ್ನಷ್ಟು ಕುತೂಹಲ ಇರಬೇಕಿತ್ತು.

ಒಂದು ಪೋಸ್ಟ್ ಮೊರ್ಟಮ್ ವರದಿ ಸುಳ್ಳು ಅಂತ ಕೋರ್ಟಿನ ಕಟಕಟೆಯಲ್ಲಿ ಋಜುವಾತವಾದ ಮೇಲೆ ನಿಜವಾದ ವರದಿ ಏನು ಎಂದು ನಮ್ಮ ನ್ಯಾಯದೀಶರು ಸಹ ಕೇಳೋದಿಲ್ಲ. ಯಾಕಂದರೆ ಒಂದು ದಿನ ಅದನ್ನು ಸೀತಾರಾಂ ಅವರು ಕೇಳಬೇಕಲ್ಲ ಅದಕ್ಕೆ ಅದನ್ನು ಅಲ್ಲೇ ಕೈಬಿಡಲಾಗಿದೆ. ನಮ್ಮ ಸೀತಾರಾಂ ಮನೆಯಿಂದ ಏನು ಎಸೆದರು ಅದು ಕಸದ ಲಾರಿಗೆ ಬೀಳುವುದು ಎಂಬುವ ವಿಚಾರ ಸಿನಿಮಾದಲ್ಲಿ ಇದೆ. ಆದರೆ ಅದೇಕೋ ಕಳಪೆ ಅನ್ನುವ ವಿಚಾರಗಳನ್ನು ಸೀತಾರಾಂ ಅಂತಹ ಕಸದ ಲಾರಿಗೆ ಹಾಕಿ ಬಂದು ಚಿತ್ರಕಥೆ ಬರೆಯಲು ಕುಳಿತಿಲ್ಲ.

ಕಿರು ತೆರೆಯಲ್ಲಿ ಕುತೂಹಲ ಹುಟ್ಟಿಸಿಕೊಳ್ಳುವುದು ಸುಲಭ ಆದವರಿಗೆ ಹಿರಿ ತೆರೆಗೆ ಬಂದಾಗ ಅದೇಕೆ ಕಷ್ಟ ಆಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟುತ್ತದೆ.

ಸಾವಿನ ಹಾಸಿಗೆಯಲ್ಲಿ ಇರುವ ಅಪ್ಪ ಮಗಳ ಮುಂದೆ ನಿನ್ನ ಅಮ್ಮನನ್ನು ಕಲ್ಯಾಣಿಯಲ್ಲಿ ನಾನೇ ಕೊಂದದ್ದು ಅನ್ನುತ್ತಾನೆ. ಅಪ್ಪ ತೀರಿಹೋಗುತ್ತಾನೆ. ಅಲ್ಲಿ ಯಾತಕ್ಕೆ ಅಮ್ಮನನ್ನು ಅಪ್ಪ ಕೊಂದರು ಅನ್ನುವ ಪ್ರಶ್ನೆ ಏಳುವುದಿಲ್ಲ. ಆದರೆ ಅದೇ ಮಗಳಿಗೆ ತನ್ನ ಪ್ರಿಯಕರ ನಿರಂಜನ್ ಕೈ ಕೊಟ್ಟಾಗ ಮಾತ್ರ ಮನಸ್ಸಿಗೆ ತೀವ್ರ ಖೇದ ಆಗುತ್ತದೆ. ದುರಾದೃಷ್ಟ ಅದೇ ಕಲ್ಯಾಣಿಯಲ್ಲಿ ಮಗಳು ಸಹ ಕೊಲೆ ಆಗುವುದು. ಮದುವೆ ಆದ ಚಾರ್ಮಿ ಇಂದ. ಅಲ್ಲಿ 200 ಕೋಟಿಯ ಆಸೆ ಇದೆ. ಹಾಗಾಗಿ ಮೈಥಿಲಿ ಕೊಳೆಯಾಗುತ್ತಾಳೆ. ಅದನ್ನು ಮನೆಯ ಪುಟ್ಟ ಹುಡುಗಿ ಪ್ರಾಂಜಲಿ ನೋಡಿರುವುದು ಎಂಬುದು ಲೆಕ್ಕಾಚಾರ ಸುಳ್ಳಾಗುವುದಿಲ್ಲ. ಕಾರಣ ಮೊದಲು ಪ್ರಾಂಜಲಿ ಅನ್ನು ತೆರೆಯ ಮೇಲೆ ತಂದು ಆಮೇಲೆ ಅವಳನ್ನು ಗೋಪ್ಯವಾಗಿ ಇಟ್ಟು ಬಿಡುತ್ತಾರೆ ನಿರ್ದೇಶಕರು. ಸೀತಾರಾಂ ಅವರು ಒಂದು ಸಿನಿಮಾ ತೀರ ಸಾಮಾನ್ಯ ಅನ್ನಿಸುವುದು ಆಗಲೇ.

ನಾಯಕ ನಿರಂಜನ್ ತನ್ನ ಪ್ರೇಯಸಿ ಮೈಥಿಲಿ ಮದುವೆ ಆದಾಗ ನಿನ್ನ ಜೀವನದಲ್ಲಿ ಏನು ಆಗದ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂಬುದು ಸಹ ಸುಳ್ಳಾಗುತ್ತದೆ. ಮೈಥಿಲಿ ಹ್ಯಾಗೆ ಕೊಲೆಯಾದಳು ಎಂಬುದು ಮಾತ್ರ ನಿರಂಜನ್ ಕಂಡು ಹಿಡಿಯಲು ಸಹ ಅಂತಹ ಕಷ್ಟ ಏನು ಪಡುವುದಿಲ್ಲ. ಮುಚ್ಚಿ ಹೋದ ಕೇಸ್ ಮತ್ತೆ ಓಪೆನ್ ಆದಾಗಲೆ ನಿಜವಾದ ಕ್ರಿಮಿನಲ್ ಜೋಡಿಯನ್ನು ಪತ್ತೆ ಹಚ್ಚಲಾಗುವುದು.

ರಾಧಿಕ ಚೇತನ್ ಅವರಿಗೆ ಒಳ್ಳೆಯ ಅವಕಾಶ ಅದನ್ನು ಅವರು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ ಸಹ. ಆಹಾ ಹೀಗಿರಬೇಕು ನನ್ನ ಮಡದಿ ಅನ್ನುವಷ್ಟು ಅವರು ಸೀರೆಯಲ್ಲಿ ಮಿಂಚಿದ್ದಾರೆ. ರಘು ಮುಖರ್ಜಿ ಬೆಣ್ಣೆಯಂತ ನಟನೆ, ಸುಡುವ ಹುಡುಗ ಆಗಿ ರಾಹುಲ್ ಮಾಧವ್, ಅಪೇಕ್ಷ ಅವರ ಅನಪೇಕ್ಷಿತ ಪಾತ್ರ ಸೊಗಸಾಗಿದೆ, ವೀಣ ಸುಂದರ್ ಹಾಗೂ ಸುಂದರ್ ರಾಜ್ ಅವರ ಜೋಡಿ ಒ ಕೆ. ಬೇಬಿ ಅಮೋಘ ನಟನೆ ಇಷ್ಟ ಆಗುತ್ತದೆ. ಸೀತಾರಾಂ ಹಾಗೂ ಸುಧ ಬೆಳವಾಡಿ ಅವರ ಪ್ರೀತಿಯ ಜಗಳ ಜಾಸ್ತಿ ಆಯಿತು ಅನ್ನಿಸುತ್ತದೆ. ಸಂಯುಕ್ತ ಹೊರನಾಡು ಅವರಿಗೆ ಹೇಳಿಕೊಳ್ಳುವಂತ ಪತ್ರ ಸಿಕ್ಕಿಲ್ಲ.

ಹಾಡುಗಳಲ್ಲಿ ಗೆಲುವು ಬಂದಿದೆ, ಛಾಯಾಗ್ರಹಣ ಅಶೋಕ್ ಕಶ್ಯಪ್ ಚಿತ್ರದ ಮೊದಲ ಹೀರೋ ಆಗಿಬಿಡುತ್ತಾರೆ. ಇದು 129 ನಿಮಿಷದ ಸಿನಿಮಾ.

ಸೀತಾರಾಂ ಪ್ರೇಮಿಗಳು ಒಂದು ಬಾರಿ ಈ ಸಿನಿಮಾ ನೋಡಬಹುದು.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡ ಸಿನಿಮಾ ಕಾಫಿ ತೋಟ ವಿಮರ್ಶೆ - Chitratara.com
Copyright 2009 chitratara.com Reproduction is forbidden unless authorized. All rights reserved.