Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡಿಗ ವಿನಯ್ ಭಾರದ್ವಾಜ್ ಹೊಸ ದಾಖಲೆ
Posted date: 14 Thu, Sep 2017 10:33:52 AM
ಕನ್ನಡ ನಾಡಿನ ಯುವಕ ಸುರದ್ರೂಪಿ ವಿನಯ್ ಭಾರದ್ವಾಜ್ ಅವರು ಮತ್ತೊಂದು ದಾಖಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದ್ದಾರೆ. ಅದೇ ‘ಸಲಾಂ ನಮಸ್ತೆ ಸಿಂಗಪೂರ್’ ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ದೇಶನ. ಇದೆ ಮೊದಲ ಬಾರಿಗೆ ಕಲರ್ಸ್ ಟಿ ವಿಯಲ್ಲಿ ಕನ್ನಡಿಗನೊಬ್ಬ ರಚಿಸಿ, ನಿರ್ದೇಶಿಸಿರುವ ಕಾರ್ಯಕ್ರಮ ಇದೆ ಸೆಪ್ಟೆಂಬರ್ ೧೦ ರಿಂದ ಪ್ರತಿ ಭಾನುವಾರ  ಏಶಿಯ-ಪೆಸಿಫಿಕ್ ದೇಶಗಳಾದ ಸಿಂಗಾಪುರ್,ಮಲೇಷಿಯ, ಇಂಡೋನೇಷಿಯ,ಥೈಲ್ಯಾಂಡ್,ಹಾಂಗ್ ಕಾಂಗ್,  ಜಪಾನ್, ಆಸ್ಟ್ರೇಲಿಯ, ನ್ಯೂಜೆಲಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಸೌತ್ ಕೊರಿಯ ದೇಶಗಳಲ್ಲಿ ಪ್ರಸಾರ ಆಗುತ್ತಿದೆ. ‘ಸಲಾಂ ನಮಸ್ತೆ ಸಿಂಗಾಪುರ್’ ೧೨ ಕಂತುಗಳ ಸಂಚಿಕೆಗೆ ಕನ್ನಡಿಗ ವಿನಯ್ ಭಾರದ್ವಾಜ್ ಚಿತ್ರೀಕರಣ ಮಾಡಿದ್ದಾರೆ. ಅತ್ಯಂತ ಪ್ರಭಾವಿ ವ್ಯಕ್ತಿಗಳು, ಪ್ರಭುದ್ದ ಸ್ಥಳಗಳು, ಸುಪ್ರಸಿದ್ದ ಕುಟುಂಬಗಳು ಎಂದು ಮೂರು ವಿಭಾಗಗಳಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.
 
ಆನಿವಾಸಿ ಭಾರತೀಯರು ಸಿಂಗಾಪುರ್ ದೇಶದಲ್ಲಿ ಇರುವವರನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ವಿನಯ್ ಭಾರದ್ವಾಜ್ ಎಂಬ ಕನ್ನಡಿಗ ಬ್ಯಾಂಕಿಂಗ್ ಉದ್ದಿಮೆ ಇಂದ ಯು ಟ್ಯೂಬ್ಗಳಿಗೆ ಕಾರ್ಯಕ್ರಮವನ್ನು ರೂಪಿಸಿ ಮೊದಲು ಬೆಳಕಿಗೆ ಬಂದವರು. ಅದಾದ ಮೇಲೆ ‘ಮಾತು ಕಥೆ ವಿನಯ್ ಜೊತೆ’ ಇವರ ಗರಿಮೆಯನ್ನು ಹೆಚ್ಚಿಸಿತು. ಇದೀಗ ಅಂತ್ರರಾಷ್ಟ್ರೀಯ ಮಟ್ಟದಲ್ಲಿ ಇವರ ನೈಪುಣ್ಯತೆಯನ್ನು ಪಸರಿಸಿದ್ದಾರೆ.
 
ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಬಿ ಬಿ ಎಂ ಪದವಿ ಪಡೆದು ೨೧ನೇ ವಯಸ್ಸಿಗೆ ವಿನಯ್ ಭಾರದ್ವಾಜ್ ಸಿಂಗಾಪುರ್ ದೇಶಕ್ಕೆ ಕೆಲಸ ಮಾಡಲು ಹೊರಟರು. ಇದುವರೆವಿಗೆ ೧೨ ವರ್ಷಗಳ ಕಾಲ ಅವರು ಬ್ಯಾಂಕಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಹತ್ತಿರದ ಸಂಬಂದಿಯನ್ನು ಕಾನ್ಸರ್ ರೋಗದಿಂದ ೨೦೧೫ ರಲ್ಲಿ ಕಳೆದು ಕೊಂಡ ನಂತರ ಇವರ ‘ಲೆಟ್ಸ್ ಟಾಲ್ಕ್ ವಿತ್ ವಿನಯ್’ ವೈಧ್ಯಕಿಯ ಪ್ರಪಂಚದ ಆಗುಹೋಗುಗಳನ್ನು ಪರಿಚಯಿಸುತ್ತ ಹೋಯಿತು. ಯು ಟ್ಯೂಬ್ ಅಲ್ಲಿ ಅಂತಹ ಕಾರ್ಯಕ್ರಮ ಮೊದಲ ಬಾರಿಗೆ ಪ್ರೇಕ್ಷಕರಿಗೆ ಅಪಾರವಾಗಿ ಹಿಡಿಸಿತು.
ಅದಾದ ಮೇಲೆ ‘ಬೆಸ್ಟ್ ಆಫ್ ದಿ ಸಿಟಿ’ ಯು ಟ್ಯೂಬ್ ಅಲ್ಲಿ ಎರಡು ಕಂತುಗಳಲ್ಲಿ ಬೆಂಗಳೂರು ಹಾಗೂ ಚೆನ್ನೈ ನಗರದ ಅನೇಕ ಜನಪ್ರಿಯ ವ್ಯಕ್ತಿಗಳ ಪರಿಚಯ ಮಾಡುತ್ತಾ ಸಾಗಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕಿರಣ್ ಮಜುಂದಾರ್, ರಘು ದೀಕ್ಷಿತ್, ಕೆ ಎಲ್ ರಾಹುಲ್, ಪಂಕಜ್ ಅಡ್ವಾಣಿ, ಡಾಕ್ಟರ್ ವಿ ಶಾಂತ, ಪದ್ಮ ಭೂಷಣ ಸುಧಾ ರಘುನಾಥನ್, ವಸುಂದರ ದಾಸ್ ಹಾಗೂ ಇನ್ನಿತರ ಜನಪ್ರಿಯ ವ್ಯಕ್ತಿಗಳು ಇವರೊಂದಿಗೆ ಮಾತು ಕಥೆಯಲ್ಲಿ ಭಾಗಿಯಾಗಿದ್ದಾರೆ. ಮತ್ತೊಂದು ‘ಸೆಲಿಬ್ರಿಟಿ ಟಾಕ್ ಶೋ’ ಅನೇಕ ಕನ್ನಡ ನಟರುಗಳನ್ನು ಆಯ್ಕೆಮಾಡಿಕೊಂಡು ಸಂದರ್ಶನ ಮಾಡಿದ್ದಾರೆ ವಿನಯ್ ಭಾರದ್ವಾಜ್.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡಿಗ ವಿನಯ್ ಭಾರದ್ವಾಜ್ ಹೊಸ ದಾಖಲೆ - Chitratara.com
Copyright 2009 chitratara.com Reproduction is forbidden unless authorized. All rights reserved.