Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರಿಯ 2 ಅಕ್ಟೋಬರ್ 13ಕ್ಕೆ ಬಿಡುಗಡೆ
Posted date: 04 Wed, Oct 2017 10:19:32 AM
14 ವರ್ಷಗಳ ಹಿಂದೆ ದರ್ಶನ್ ಅಭಿನಯದ ‘ಕರಿಯ ಚಿತ್ರ ಜಯಭೇರಿ ಹೊಡೆದಿತ್ತು. ಇಂದು ಸಂತೋಷ್ ಅಭಿನಯದ ‘ಕರಿಯ 2 ಚಿತ್ರ ಪಿ 2 ಪ್ರೊಡಕ್ಷನ್ ಅಡಿಯಲ್ಲಿ ಪರಮೇಶ್ ಹಾಗೂ ಪ್ರೇಮ್ ಅವರು ನಿರ್ಮಾಣದಲ್ಲಿ ತಯಾರಾಗಿದೆ. ಸಂತೋಷ್ ಎಂಟೆರ್ಪ್ರೈಸಸ್ ಸಹಯೋಗದಲ್ಲಿ ನಿರ್ಮಾಣಗೊಂಡಿರೋ ‘ಕರಿಯ ೨ ಚಿತ್ರ ಇದೇ ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ.
 
ಪ್ರಭು ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ಕೃಪಾ ಕರಣ್ ಅವರ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಚಿನ್ಮಯಿ ಗೀತ ಸಾಹಿತ್ಯ ಒದಗಿಸಿದ್ದಾರೆ. ಸಂತೋಷ್ ಅವರಿಗೆ ನಾಯಕಿಯಾಗಿ ಜನಪ್ರಿಯ ನಟಿ ಮಯೂರಿ ಅವರು ಅಭಿನಯಿಸಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಅಜಯ್ ಘೋಷ್ ಈ ಚಿತ್ರದಲ್ಲಿ ಖಳ ನಟರಾಗಿ ಅಬೀನಯಿಸಿದ್ದಾರೆ. ಸಾಧು ಕೋಕಿಲ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಶ್ರೀನಿವಾಸ್ ದೇವಸ್ವಮ್ ಛಾಯಾಗ್ರಹಣ, ಶ್ರೀಕಾಂತ್ ಗೌಡ ಸಂಕಲನ ಈ ಚಿತ್ರಕ್ಕಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರಿಯ 2 ಅಕ್ಟೋಬರ್ 13ಕ್ಕೆ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.