Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರಿಗೆ ನೆರವು..
Posted date: 19 Sun, Apr 2020 08:00:17 PM
ಕೊರೋನ ಹಾವಳಿಯಿಂದ ಸಂಕಷ್ಟಕ್ಕೊಳಪಟ್ಟವರಲ್ಲಿ ಕರ್ನಾಟಕ ಚಲನಚಿತ್ರ ಪೋಷಕ  ಕಲಾವಿದರು ಹಾಗೂ ತಂತ್ರಜ್ಞರು ಹೊರತಲ್ಲ... ಚಿತ್ರೀಕರಣ ನಿಂತು‌‌ ಸುಮಾರು ದಿನಗಳೆ‌‌ ಆಗಿದೆ. ಈ ಸಮಯದಲ್ಲಿ ಕೆಲವು ಕಲಾವಿದರಿಗೆ ಜೀವನ‌‌ ನಡೆಸುವುದು ಕಷ್ಟವಾಗಿದೆ...ಅಂತಹವರ ಕಷ್ಟಕ್ಕೆ ನೆರವಾಗಲು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪರವಾಗಿ ಡಿಂಗ್ರಿ ನಾಗರಾಜ್, ಶಶಿಕಲಾ, ಉಮಾ ಶಂಕರ್, ಉಮಾ ಹೆಬ್ಬಾರ್, ಜ್ಯೋತಿ ‌ಮೂರುರ್, ಆಡಗೋಡಿ‌ ಶ್ರೀನಿವಾಸ್,ಭಾಸ್ಕರ್ ಮುಂತಾದ ‌ಕಲಾವಿದರು ಲೇಬರ್  ಕಮಿಷನರ್ ಕಚೇರಿಯಲ್ಲಿ ರವಿಕುಮಾರ್ ಅವರನ್ನು ಸಂಪರ್ಕಿಸಿ ನೆರವು ಕೇಳುತ್ತಾರೆ.
 ರವಿಕುಮಾರ್ ಅವರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಮೂಲಕ 325 ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್ ಗಳನ್ನು ತರಿಸಿಕೊಡುತ್ತಾರೆ.. ಈ‌ ಎಲ್ಲಾ ಕಿಟ್ ಗಳನ್ನು ‌ಪೋಷಕ ಕಲಾವಿದರ ಸಂಫದ ವತಿಯಿಂದ ಕಷ್ಟದಲ್ಲಿರುವ ಕಲಾವಿದರು ಹಾಗೂ ತಂತ್ರಜ್ಞರಿಗೆ ಹಂಚಲಾಯಿತು. ರವಿಕುಮಾರ್ ಅವರಿಗೆ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಹಾಗೂ ಪ್ರಸಾದ್ ಕೊಣ್ಣಾರ್ ಅವರಿಗೆ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ಧನ್ಯವಾದ ತಿಳಿಸಿದೆ...
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರಿಗೆ ನೆರವು.. - Chitratara.com
Copyright 2009 chitratara.com Reproduction is forbidden unless authorized. All rights reserved.