ಕೊರೋನ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ವ್ಯಾಪ್ತಿಗೆ ಬರುವ 18 ಸಂಘಗಳಿಗೆ ತಲಾ 25 ಸಾವಿರದಂತೆ 4,50,000/- ರೂಗಳನ್ನು ನಟ ಉಪೇಂದ್ರ ಪ್ರತ್ಯೇಕವಾಗಿ ಚೆಕ್ ಗಳನ್ನು ನೀಡಿ ಧನ ಸಹಾಯ ಮಾಡಿದ್ದಾರೆ.. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಗೌರವಾಧ್ಯಕ್ಷರಾದ ಸಾ.ರಾ.ಗೋವಿಂದು, ಉಪಾಧ್ಯಕ್ಷರಾದ ರವಿಶಂಕರ್ ಅವರಿಗೆ ಉಪೇಂದ್ರ ಚೆಕ್ ಹಸ್ತಾಂತರಿಸಿದರು. ಕೆ.ಎಂ.ವೀರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,