Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲರ್ಸ್‌ ಕನ್ನಡದಲ್ಲಿ ಗಜಮುಖನಿಗೆ ಸ್ವರಾಭಿಷೇಕ!
Posted date: 24 Thu, Aug 2017 08:46:46 AM
 ಕಲರ್ಸ್‌ ಕನ್ನಡದಲ್ಲಿ ಗಜಮುಖನಿಗೆ ಸ್ವರಾಭಿಷೇಕ! ವಿಜಯ್ ಪ್ರಕಾಶ್ ನಿರೂಪಣೆಯಲ್ಲಿ ನಾದಲೋಕಕ್ಕೆಕೊಂಡೊಯ್ಯುವ ಸ್ವರಾಭಿಷೇಕ
ಗಣೇಶ ಹಬ್ಬಎಂದರೆಎಲ್ಲೆಡೆಆಚರಣೆ, ಸಡಗರ, ಸಂಭ್ರಮ. ಬೀದಿ ಗಣಪನ ಮುಂದೆಆರ್ಕೇಸ್ಟ್ರಾ ಹಾಕಿ ಸಂಜೆಯಲ್ಲಿ ಹಾಡುಕೇಳಿ ಆನಂದಿಸುವ ಅಭ್ಯಾಸ ಸರ್ವೇಸಾಮಾನ್ಯ. ಈಗ ಕಲರ್ಸ್‌ಕನ್ನಡ ವಾಹಿನಿಯುಗಜಮುಖನಿಗೆ ವಂದನೆ ಸಲ್ಲಿಸುವ "ಸ್ವರಾಭಿಷೇಕ" ಸಂಗೀತ ಸುಧೆಯಕಾರ್ಯಕ್ರಮವನ್ನುಅಗಸ್ಟ್ ೨೫ರಿಂದ ೨೭ರವರೆಗೆ ಪ್ರಸಾರ ಮಾಡಲಿದೆ. ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ ಸ್ವರಾಭಿಷೇಕ ಮೂಡಿಬರಲಿದೆ.

ಗಣೇಶ ಹಬ್ಬದಂದುಅಗಸ್ಟ್ ೨೫ರ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆಗಣೇಶ ಸ್ವರಾಭಿಷೇಕದಲ್ಲಿಸಂಗೀತಲೋಕದ ದಿಗ್ಗಜರುಗಳಾದ ಆರ್.ಕೆ. ಪದ್ಮನಾಭ್, ಬಿ.ಜಯಶ್ರೀ, ವಾರೀಜಾಶ್ರೀ ಇವರುಗಳ ಕಂಠಸಿರಿಯಲ್ಲಿ ವಕ್ರತುಂಡನಿಗೆ ವಂದನೆ ಸಲ್ಲಿಸಲಾಗುವುದು. ವಿಘ್ನನಿವಾರಕನಆರಾಧನೆಕುರಿತ ಕ್ಲಾಸಿಕಲ್ ಹಾಡುಗಳನ್ನು ಆರ್.ಕೆ.ಪದ್ಮನಾಭ್, ರಂಗಗೀತೆಗಳನ್ನು ಬಿ.ಜಯಶ್ರೀ, ಕ್ಲಾಸಿಕಲ್ ವರ್ಲ್ಡ್ ಫ್ಯೂಸನ್ ಗೀತೆಗಳನ್ನು ವಾರಿಜಾಶ್ರೀ ಹಾಗೂ ಗಣಪತಿ ಹಬ್ಬದಲ್ಲಿ ಹೆಚ್ಚು ಜನಪ್ರೀಯತೆ ಪಡೆದಆರ್ಕೇಸ್ಟ್ರಾ ಹಾಡುಗಳನ್ನು ವಿಜಯ್ ಪ್ರಕಾಶ್ ಹಾಡಲಿದ್ದಾರೆ. ವಿಶೇಷವೆಂದರೆ, ಗಣೇಶನ ಸ್ವರಾಭಿಷೇಕದಲ್ಲಿ ಪ್ರಪ್ರಥಮವಾಗಿ ವಿಜಯ್ ಪ್ರಕಾಶ್‌ಅವರ ಪತ್ನಿ ಮಹತಿಯೊಂದಿಗೆ ಹಾಡಿ ಆನಂದಿಸಲಿದ್ದಾರೆ. 

ಗಾನ ಕೋಗಿಲೆಗಳಾದ ವಿಜಯ್ ಪ್ರಕಾಶ್ ಹಾಗೂ ರಾಜೇಶ್‌ಕೃಷ್ಣನ್‌ರವರ ಕಂಠಸಿರಿಯಲ್ಲಿ ಪ್ರೀತಿ ಪ್ರೇಮದ ಸುಮಧುರ ಗೀತೆಗಳನ್ನು ಅಗಸ್ಟ್ ೨೬ ಮತ್ತು ೨೭ರಂದು ರಾತ್ರಿ ೯ಗಂಟೆಗೆ ಸ್ವರಾಭಿಷೇಕದಲ್ಲಿ ಕೇಳಿ ಆನಂದಿಸಬಹುದು. ೬೦ರ ದಶಕದ ಹಾಡುಗಳಿಂದ ಹಿಡಿದುಇಲ್ಲಿಯವರೆಗಿನ ಹಾಡನ್ನುರಾಜೇಶ್‌ಕೃಷ್ಣನ್ ಹಾಡುವುದರಜೊತೆಗೆಅವರ ಸಂಗೀತಾನುಭವ, ಹರಟೆ ಮಾತುಕತೆಯೂಇರುತ್ತದೆ. ಒಬ್ಬರು ಹಾಡಿದ ಹಾಡನ್ನು ಮತ್ತೊಬ್ಬರು ಹಾಡುತ್ತಾ ಸಂಗೀತದರಸದೌತಣವನ್ನು ಸ್ನೇಹಿತರಿಬ್ಬರು ಸ್ವರಾಭಿಷೇಕದಲ್ಲಿ ಸವಿಯಲಿದ್ದಾರೆ.

ಗಾನಲೋಕಕ್ಕೆ ಕರೆದೊಯ್ಯುವ ಸಂಗೀತ ಸುಧೆಯ "ಸ್ವರಾಭಿಷೇಕ" ಕಾರ್ಯಕ್ರಮವನ್ನು ಶುಕ್ರವಾರದಿಂದ ಭಾನುವಾರದವರೆಗೆ ಕಲರ್ಸ್‌ಕನ್ನಡದಲ್ಲಿತಪ್ಪದೇ ವೀಕ್ಷಿಸಿ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲರ್ಸ್‌ ಕನ್ನಡದಲ್ಲಿ ಗಜಮುಖನಿಗೆ ಸ್ವರಾಭಿಷೇಕ! - Chitratara.com
Copyright 2009 chitratara.com Reproduction is forbidden unless authorized. All rights reserved.