Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲರ್ಸ್‌ ಕನ್ನಡದಲ್ಲಿ ಬಾಂಧವ್ಯ ಬೆಸೆಯುವ ಹಬ್ಬ-ಅನುಬಂಧ ಅವಾರ್ಡ್ಸ್ 2017
Posted date: 09 Sat, Sep 2017 08:36:17 AM
ಕಲರ್ಸ್‌ಕನ್ನಡದಧಾರಾವಾಹಿ, ರಿಯಾಲಿಟಿ ಶೋಗಳ ವೀಕ್ಷಕರಾಗಿ ನೀವು ಮೆಚ್ಚುಗೆ ನೀಡಿ, ಪರದೆಯ ಮೇಲೆ ಬರುವ ಪಾತ್ರಗಳನ್ನು ನಿಮ್ಮ ಮನೆಯವರಂತೆ ಸ್ವೀಕರಿಸಿದ್ದೀರಿ. ನೀವು ಪ್ರೀತಿ ನೀಡಿ ಬೆಳೆಸಿರುವ ನಿಮ್ಮ ಅಚ್ಚು ಮೆಚ್ಚಿನಕಲಾವಿದರನ್ನು ವೇದಿಕೆಯ ಮೇಲೆ ಆಹ್ವಾನಿಸಿ, ಅವರೊಂದಿಗೆ ನಿಮಗಿರುವ ನಂಟು, ಕಾಳಜಿಯನ್ನು ಸಂಭ್ರಮಿಸುವಅಭೂತಪೂರ್ವಕಾರ್ಯಕ್ರಮಅನುಬಂಧಅವಾರ್ಡ್ಸ್. ಜೊತೆಗೆಕತೆ ಮತ್ತು ಪಾತ್ರಗಳನ್ನು ರೂಪಿಸಿ ತೆರೆಯ ಮೇಲೆ ಪ್ರಸ್ತುತ ಪಡಿಸಿದ ತಾಂತ್ರಿಕ ವರ್ಗದವರೆಲ್ಲರ ಪರಿಶ್ರಮಕ್ಕೆ ನೀಡುವಉಡುಗೊರೆಇದಾಗಿದೆ. ವೀಕ್ಷಕರು ಮತ್ತುಕಲಾವಿದರ ಮಧ್ಯೆ ಬೆಸುಗೆಯಾಗಿರುವ ಈ ಕಲರ್‌ಫುಲ್‌ಅನುಬಂಧಅವಾರ್ಡ್ಸ್ ೨೦೧೭ ಇದೇ ಸೆಪ್ಟೆಂಬರ್ ೯ ಮತ್ತು ೧೦ರ ಶನಿವಾರ ಮತ್ತು ಭಾನುವಾರರಾತ್ರಿ ೮ ಗಂಟೆಗೆ ಕಲರ್ಸ್‌ಕನ್ನಡದಲ್ಲಿ ಪ್ರಸಾರವಾಗಲಿದೆ.

ಬಾಂಧವ್ಯ ಬೆಸೆಯುವಅನುಬಂಧಅವಾರ್ಡ್ಸ್‌ನ ೪ನೇ ಸರಣಿಯು ಪ್ರತಿ ವರ್ಷದಂತೆಅದ್ಧೂರಿಯಾಗಿದ್ದು ವೀಕ್ಷಕರಿಗೆ ಈ ಬಾರಿಯೂ ಸಾಕಷ್ಟು ವಿಶೇಷಗಳನ್ನು ಹೊತ್ತುತಂದಿದೆ. ಕಣ್‌ಕೋರೈಸುವ ವೇದಿಕೆಯ ಮೇಲೆ ಅಚ್ಚು ಮೆಚ್ಚಿನ ಪಾತ್ರಗಳ ರಂಗುರಂಗಾದ ವೇಷ ಭೂಷಣಗಳು, ಬಣ್ಣ ಬಣ್ಣದ ಬೆಳಕಿನಲ್ಲಿ ರಾರಾಜಿಸುವಕಲಾವಿದರು, ಅವರ ಮನಮೋಹಕ ಪರ್ಫಾಮನ್ಸ್‌ಗಳು, ಮಿನುಗುವ ಸಿನೆಮಾ ತಾರೆಯರು ಮತ್ತು ಕಲರ್ಸ್‌ಕನ್ನಡ ಪರಿವಾರದವರೆಲ್ಲರ ಸಂಭ್ರಮದಝಲಕ್. ಡಾನ್ಸಿಂಗ್ ಸ್ಟಾರ್‌ಕಾರ್ಯಕ್ರಮದ ಮೂಲಕ ನೋಡುಗರ ಮನೆಮಗಳಾಗಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಬಹುಭಾಷಾತಾರೆಪ್ರಿಯಾಮಣಿ ಮೊಟ್ಟಮೊದಲ ಬಾರಿಗೆ
ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಬಾರಿಯಅನುಬಂಧಅವಾರ್ಡ್ಸ್‌ನ ವಿಶೇಷ. ಅನುಬಂಧಕ್ಕೆ ಅವಿನಾಭಾವ ಸಂಬಂಧವಿರುವ ವಿಜಯ್‌ರಾಘವೇಂದ್ರ ಈ ಬಾರಿಯೂ ನಿರೂಪಣೆ ಮಾಡುತ್ತಿದ್ದುಜೊತೆಗೆರಿಯಾಲಿಟಿ ಸ್ಟಾರ್‌ಅಕುಲ್ ಬಾಲಾಜಿ ಸಾಥ್ ನೀಡಿದ್ದಾರೆ. 
ನಿಮ್ಮ ಪ್ರೀತಿಯ ಪಾತ್ರಗಳು ಜನಮೆಚ್ಚಿದ, ಮನೆಮೆಚ್ಚಿದ ಪ್ರಶಸ್ತಿಗಳಿಗೆ ನೇಮಕಗೊಂಡಿದ್ದುಯಾವ ಪ್ರಶಸ್ತಿ ಯಾರಿಗೆ ಸಲ್ಲುತ್ತದೆಎಂಬುದನ್ನುಕಾದು ನೋಡಬೇಕು. ಇದಷ್ಟೇಅಲ್ಲದೇಕಲಾವಿದನ ನಿಜ ಜೀವನದಲ್ಲಿರುವ ತಲ್ಲಣಗಳನ್ನು ಪರಿಚಯಿಸುವ ಪ್ರಯತ್ನ ‘ಕತೆಯ ಹಿಂದಿನ ಕತೆ’ ನೋಡುಗನಲ್ಲಿ ಕಂಬನಿ ಮೂಡಿಸುತ್ತದೆ. ಸೂಪರ್ ಮಿನಿಟ್ ಮುಖಾಂತರ ವಾಕ್‌ಚಿಕಿತ್ಸೆಗೆ ನೆರವು ಪಡೆದ ಪುಟ್ಟ ಬಾಲಕಿ ಅಮೂಲ್ಯಳ ನುಡಿಮುತ್ತುಗಳು ಮೂಕವಿಸ್ಮಿತಗೊಳಿಸುತ್ತದೆ. 
ಕಲರ್ಸ್‌ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್‌ಪರಮೇಶ್ವರ್‌ಗುಂಡ್ಕಲ್‌ಹೇಳುವಂತೆ, "ಅವಾರ್ಡ್ಸ್‌ಎಂದರೆಕಲಾವಿದರಿಗೆಕೊಡುವ ಪ್ರಶಸ್ತಿ ಎಂಬ ಮಾತಿದೆ. ಆದ್ರೆಅನುಬಂಧಅವಾರ್ಡ್ಸ್ ನೀವು ಪ್ರೀತಿಯಿಂದ ಒಪ್ಪಿಸಿಕೊಂಡಿರುವ ಪಾತ್ರಗಳಿಗೆ, ಕತೆಗಳಿಗೆ ಮತ್ತುಅದರ ಸಫಲತೆಗೆಕಾರಣರಾದತಂತ್ರಜ್ಞರಿಗೆ ಸಲ್ಲಿಸುವಗೌರವ. ಇದು ನಮ್ಮ ವಾಹಿನಿಯ ಬಹು ಪ್ರೀತಿಯ, ಕಾಳಜಿಯ ಕಾರ್ಯಕ್ರಮ. ಎಲ್ಲಕಲಾವಿದರುತಾಂತ್ರಿಕ ವರ್ಗ, ಚಾನೆಲ್‌ನ ಸಿಬ್ಬಂದಿ ಎಲ್ಲರೂಒಟ್ಟು ಸೇರಿ ಪರಸ್ಪರರಯಶಸ್ಸನ್ನು ಸಂಭ್ರಮಿಸುವ ಹಬ್ಬ." ಎನ್ನುತ್ತಾರೆ.
ಕಲರ್ಸ್‌ಕನ್ನಡದ ನಾನ್‌ಫಿಕ್ಷನ್ ಹೆಡ್‌ಜಯದೇವ ಶ್ರೀನಿವಾಸ್‌ಹೇಳುವಂತೆ, "ಮೊಟ್ಟ ಮೊದಲ ಬಾರಿಗೆಒಂದುದೊಡ್ಡ ಫ್ಯಾಮಿಲಿ ಅನುಬಂಧಕ್ಕೆ ಬಂದಿದೆ. ಕಲರ್ಸ್‌ಕನ್ನಡದಎಲ್ಲ ೧೬೨ ಕಲಾವಿದರೂ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿರುವುದು ಬಣ್ಣದ ನಂಟು ಭಾವನೆಗಳು ನೂರೆಂಟು ಎಂಬ ನಿಜವಾದಅನುಬಂಧದ ಭಾವವನ್ನು ಮೂಡಿಸಲಿದೆ. ವಾಹಿನಿಯಇಡೀತಂಡ ಸೇರಿಒಂದು ವಿಶೇಷ ಅನುಬಂಧಅವಾರ್ಡ್ಸ್‌ನ್ನು ಈ ಬಾರಿಯೂ ಮಾಡಿದ್ದಾರೆ. ಈ ಅನುಬಂಧತಮಾಷೆ, ತಲೆಹರಟೆಜೊತೆಗೆತುಂಬಾಎಮೋಷನಲ್‌ಆಗಿರುವಂತಹದ್ದು."   
ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭಕ್ಕೆಕನ್ನಡ ಚಲನಚಿತ್ರತಾರೆಯಾರಾದ ಪ್ರಜ್ವಲ್‌ದೇವರಾಜ್, ಶಾನ್ವಿ ಶ್ರೀವತ್ಸವ್, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಕಿಶೋರ್, ಮಾಳವಿಕಾ ಅವಿನಾಶ್, ರಚಿತಾರಾಮ್, ಲೋಕನಾಥ್, ಶಿವರಾಂ, ಅಮೂಲ್ಯ&ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಭಾವನೆಗಳ ಬೆಸೆಯುವ ಹಬ್ಬಅನುಬಂಧಅವಾಡ್ಸ್ ೨೦೧೭ ಕಾರ್ಯಕ್ರಮವನ್ನು ಕಲರ್ಸ್‌ಕನ್ನಡದಲ್ಲಿ ಸೆಪ್ಟೆಂಬರ್ ೯ ಮತ್ತು ೧೦ ರಂದುರಾತ್ರಿ ೮ ಗಂಟೆಗೆತಪ್ಪದೇ ವೀಕ್ಷಿಸಿ!!
ಕಲರ್ಸ್‌ಕನ್ನಡ ಬಗ್ಗೆ
ಕಲರ್ಸ್‌ಕನ್ನಡಒಂದುಕೌಟುಂಬಿಕ ಮನರಂಜನಾಚಾನೆಲ್. ಪ್ರೇಕ್ಷಕರಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವ ಮತ್ತುಕನ್ನಡ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಗುಣಮಟ್ಟದಕಾರ್ಯಕ್ರಮ ನೀಡುವಚಾನೆಲ್. ಪುಟ್ಟಗೌರಿ ಮದುವೆ, ಅಗ್ನಿಸಾಕ್ಷಿ, ಲಕ್ಷಮೀಬಾರಮ್ಮ, ಅಕ್ಕ, ಕುಲವಧು, ಓಂ ಶಾಂತಿ ಓಂ ಶಕ್ತಿ, ಮನೆದೇವ್ರು, ಗಾಂಧಾರಿ, ಕಿನ್ನರಿ, ಯಶೋಧೆ, ಚರಣದಾಸಿ, ಅಶ್ವಿನಿ ನಕ್ಷತ್ರ, ರಾಧಾರಮಣ, ಪದ್ಮಾವತಿ, ಮಜಾಟಾಕೀಸ್, ಡಾನ್ಸಿಂಗ್ ಸ್ಟಾರ್, ಬಿಗ್‌ಬಾಸ್, ಸೂಪರ್ ಮಿನಿಟ್ ಮುಂತಾದ ಹಲವು ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿದಚಾನೆಲ್‌ಇದು.
ವಯಾಕಾಮ್೧೮ ಬಗ್ಗೆ
ವಯಾಕಾಮ್ ೧೮ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮನೋರಂಜನಾ ನೆಟ್‌ವರ್ಕ್. ಇದು ವಯಾಕಾಮ್‌ಇಂಕ್. ಮತ್ತು ನೆಟ್‌ವರ್ಕ್೧೮ ಗುಂಪಿನ ಸಹಭಾಗಿತ್ವದ ಸಂಸ್ಥೆ. ವೈವಿಧ್ಯಮಯ ಕಾರ್ಯಕ್ರಮಗಳು, ಆನ್‌ಲೈನ್, ಶಾಪ್ಸ್ ಮತ್ತು ಸಿನಿಮಾಗಳ ಮೂಲಕ ವಯಾಕಾಮ್೧೮ ಭಾರತದಲ್ಲಿ ಮನೋರಂಜನೆಗೆ ಹೊಸ ರೂಪ ನೀಡಿದ ಸಂಸ್ಥೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲರ್ಸ್‌ ಕನ್ನಡದಲ್ಲಿ ಬಾಂಧವ್ಯ ಬೆಸೆಯುವ ಹಬ್ಬ-ಅನುಬಂಧ ಅವಾರ್ಡ್ಸ್ 2017 - Chitratara.com
Copyright 2009 chitratara.com Reproduction is forbidden unless authorized. All rights reserved.