Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲ್ಯಾಣನಗರದಲ್ಲಿ ನವರಸ ನಟನ ಅಕಾಡೆಮಿ ನೂತನ ಶಾಖೆ
Posted date: 27 Mon, May 2019 02:17:39 PM

ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪ್ರಾಂಶುಪಾಲರಾಗಿರುವ ‘ನವರಸ ನಟನ ಅಕಾಡೆಮಿ’ ಇತ್ತೀಚೆಗಷ್ಟೇ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಆರಂಭವಾದ ಸಂಸ್ಥೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂಬುದು ಸಂಸ್ಥೆಯ ಹೆಚ್ಚುಗಾರಿಕೆ. ಮೊದಲನೇ ವರ್ಷದಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಇದೀಗ ಕಿರುತೆರೆ, ಹಿರಿತೆರೆ ಹಾಗೂ ವೆಬ್ ಸೀರಿಸ್’ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಹುರುಪಿನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್ ಕಲ್ಯಾಣನಗರದಲ್ಲಿ ನೂತನ ಶಾಖೆಯನ್ನು ಜೂನ್ 10ರಿಂದ ಪ್ರಾರಂಭಿಸಲು ಮುಂದಾಗಿದ್ದಾರೆ.

ವಾರ ಪೂರ್ತಿ ಹಾಗೂ ವಾರಂತ್ಯದ ತರಗತಿಗಳು ನಡೆಯಲಿದ್ದು, ಈ ಶಾಖೆಯಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಈಜು, ನೃತ್ಯ,ಫೈಟಿಂಗ್ ಮತ್ತು ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಜೊತೆಗೆ ಬೀದಿ ನಾಟಕ, ಸಂಕಲನ ಹಾಗೂ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿ ಸಜ್ಜುಗೊಳಿಸಲಾಗಿದೆ.

ಜೂನ್ 10೦ರಿಂದ ಮೊದಲನೇ ತಂಡದ ತರಗತಿ ಪ್ರಾರಂಭವಾಗಲಿದೆ. ಈ ಕುರಿತು ಪ್ರಾಂಶುಪಾಲರಾದ ಎಸ್.ನಾರಾಯಣ್ ಮಾಹಿತಿ ನೀಡಿದ್ದಾರೆ.
‘ಸದಾಶಿವನಗರದಲ್ಲಿ ಒಂದು ವರ್ಷ ಯಶಸ್ವಿಯಾಗಿ ಮುಗಿಸಿ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಪ್ರಾರಂಭದಿಂದಲೂ ನಮಗೆ ಚಿತ್ರರಂಗ, ಕಿರುತೆರೆ ಹಾಗೂ ಮಾಧ್ಯಮಗಳಿಂದ ಉತ್ತಮ ಬೆಂಬಲ ದೊರಕಿದೆ. ಇದೇ ಹುಮ್ಮಸ್ಸಿನಲ್ಲಿ ‘ನವರಸ ನಟನ ಅಕಾಡೆಮಿ’ ಕಲ್ಯಾಣನಗರದಲ್ಲೂ ಪ್ರಾರಂಭಿಸಿದ್ದೇವೆ. ನೂತನ ಶಾಖೆಯಲ್ಲಿ ಆರು ತಿಂಗಳ ಕೋರ್ಸ್  ಇರಲಿದ್ದು, ಒಂದಷ್ಟು ಹೊಸ ವಿಷಯಗಳನ್ನು ಇಲ್ಲಿ ಸೇರಿಸಿಕೊಂಡಿದ್ದೇವೆ. ನಮ್ಮ ಸಂಸ್ಥೆಗೆ ಬಂದ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಸಿದ್ಧರಾಗಿ ಹೋಗಬೇಕೆಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಸಾಕಷ್ಟು ಮುತುವರ್ಜಿ ತೆಗೆದುಕೊಳ್ಳಲಿದ್ದೇವೆ. ನಿರ್ದೇಶಕ ಎಸ್ ಮಹೇಂದರ್, ರಂಗಭೂಮಿಯ ನುರಿತವರಿಂದ ತರಬೇತಿ ಕೊಡಿಸುವುದು ನಮ್ಮ ಉದ್ದೇಶ. ಹಾಗೆಯೇ ವಿದ್ಯಾರ್ಥಿಗಳು ತರಬೇತಿ ಮುಗಿದ ಬಳಿಕ ಒಂದು ನಾಟಕ ಪ್ರದರ್ಶನ ಮತ್ತು ಕಿರುಚಿತ್ರ ಮಾಡಿ ತೋರಿಸಬೇಕು. ಇದಕ್ಕೆ ಬೇಕಾದ ತಯಾರಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲ್ಯಾಣನಗರದಲ್ಲಿ ನವರಸ ನಟನ ಅಕಾಡೆಮಿ ನೂತನ ಶಾಖೆ - Chitratara.com
Copyright 2009 chitratara.com Reproduction is forbidden unless authorized. All rights reserved.