Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮ ಚಿತ್ರಕ್ಕೆ ಚಾಲನೆ
Posted date: 22 Thu, Mar 2018 08:36:39 AM
ಯಶ್‌ದೀಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಂತಕುಮಾರ್ ಅವರು ನಿರ್ಮಿಸುತ್ತಿರುವ ‘ಗ್ರಾಮ‘ ಚಿತ್ರದ ಮುಹೂರ್ತ ಸಮಾರಂಭ ಮಾರ್ಚ್ ೧೯ರ ಸೋಮವಾರ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆಯಿತು. ನಾಯಕ ಹಾಗೂ ನಾಯಕಿ ಕಾಡು ಮಲ್ಲೇಶ್ವರನಿಗೆ ನಮಸ್ಕರಿಸುವ ಮೊದಲ ಸನ್ನಿವೇಶಕ್ಕೆ ಹೇಮಂತಕುಮಾರ್ ಆರಂಭ ಫಲಕ ತೊರಿದರು. ಕುಮರೇಶ್ ಬಾಬು ಕ್ಯಾಮೆರಾ ಚಾಲನೆ ಮಾಡಿದರು. 
ಹರಿ ಕಿರಣ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ಒಂದು ಚಿತ್ರ ನಿರ್ದೇಶಿಸಿ, ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಒದಗಿಸಿರುವ ಹರಿ ಕಿರಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ವಿಜಯ್ ಭರಮಸಾಗರ ಅವರು ಸಂಭಾಷಣೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 
ಚಿತ್ರಕ್ಕೆ ೩೮ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಕರ್ನಾಟಕ- ಆಂದ್ರ ಪ್ರದೇಶ ಗಡಿಯ, ಚಿಂತಾಮಣಿ ಬಳಿಯ ಹಳ್ಳಿಯೊಂದರಲ್ಲಿ ಹದಿನೆಂಟು ದಿನಗಳ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳಿ ಈ ಚಿತ್ರದಲ್ಲಿದೆ.
ಕೃಷ್ಣಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರವಿಕಲ್ಯಾಣ್ ಸಂಗೀತ ನೀಡಿದ್ದಾರೆ. ಬಾಬಿ ಸಂಕಲನ, ವಿಜಯ್ ಕೃಷ್ಣ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು, ನಂದು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪ್ರಶಾಂತ್ ಬರೆದಿದ್ದಾರೆ. 
ಲಿಖಿತ್ ಸೂರ್ಯ(ಲೈಫ಼್ ಸೂಪರ್ ಖ್ಯಾತಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಲಹರಿ. ಸತ್ಯಪ್ರಕಾಶ್, ಸುಧಾರಾಣಿ, ಸುಮನ್, ಅವಿನಾಶ್, ಸಾಧುಕೋಕಿಲ, ರಾಮಕೃಷ್ಣ, ಶಿವರಾಮಣ್ಣ, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಗ್ರಾಮ ಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.