Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾನ್ ಫ಼ಿಲಂ ಫ಼ೆಸ್ಟಿವಲ್‌ನಲ್ಲಿ ಕನ್ನಡದ ಡೇವಿಡ್
Posted date: 14 Tue, May 2019 08:41:23 AM

ವಿಶ್ವ ವಿಖ್ಯಾತ ಕಾನ್ ಫ಼ಿಲಂ ಫ಼ೆಸ್ಟಿವಲ್‌ನಲ್ಲಿ ಕನ್ನಡದ ‘ಡೇವಿಡ್‘ ಚಿತ್ರ ಪ್ರದರ್ಶನವಾಗುತ್ತಿದೆ ಎಂದು ನಿರ್ದೇಶಕ ಭಾರ್ಗವ್ ಯೋಗಂಭರ್ ತಿಳಿಸಿದ್ದಾರೆ.
ಮರ್ಡರ್ ಮಿಸ್ಟರಿ ಕಥಾ ಹಂದರ ಹೊಂದಿರುವ ಈ ಚಿತ್ರದ ವಲ್ಡ್ ಪ್ರೀಮಿಯರ್ ಪ್ರತಿಷ್ಟಿತ ಕಾನ್ ಫ಼ಿಲಂ ಫ಼ೆಸ್ಟಿವಲ್‌ನಲ್ಲಿ ಆಗುತ್ತಿರುವುದು ನನಗೆ ಹಾಗೂ ಚಿತ್ರತಂಡಕ್ಕೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ನಿರ್ದೇಶಕ ಭಾರ್ಗವ್. ಕಾನ್ ಫಿಲಂ ಫ಼ೆಸ್ಟಿವಲ್ ಈ ಬಾರಿ ಮೇ೧೪ ರಿಂದ ೨೫ರವರೆಗೂ ನಡೆಯಲಿದೆ.

ಮಹಾನಂದಿ ಪ್ರೊಡಕ್ಷನ್ಸ್, ಲಯನ್ಸ್ ಗ್ರಿಪ್ಸ್ ಹಾಗೂ ಡಾರ್ಲಿಂಗ್ ಫ಼ಿಲಂಸ್(ಆಸ್ಟ್ರೇಲಿಯಾ) ಲಾಂಚನದಲ್ಲಿ ಪ್ರಸಾದ್ ರುದ್ರಮುನಿ, ಪ್ರದೀಪ್, ಉಮೇಶ್, ಸ್ಟೀವ್ ರೈಸ್, ಸೈಲಜ, ಬಾಲಸುಬ್ರಮಣ್ಯ ಹಾಗೂ ದೇವ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶ್ರೇಯಸ್ ಚಿಂಗ(ರಂಗ್‌ಬಿರಂಗ್ ಖ್ಯಾತಿ), ಅವಿನಾಶ್ ಯಳಂದೂರು, ಹರೀಶ್, ಬುಲೇಟ್ ಪ್ರಕಾಶ್, ರಾಕೇಶ್ ಅದಿಗ, ಕಾವ್ಯ ಶಾ, ನವ್ಯ ರಮೇಶ್, ಪ್ರತಾಪ್ ನಾರಾಯಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಳಿವುದ್‌ನ ಸ್ಟೀವ್ ರೈಸ್ ಹಾಗೂ ದೇವ ಅವರ ಛಾಯಾಗ್ರಹಣ, ಸಿದ್ಧಾರ್ತ್ ಹಾಗೂ ಮುಖೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾನ್ ಫ಼ಿಲಂ ಫ಼ೆಸ್ಟಿವಲ್‌ನಲ್ಲಿ ಕನ್ನಡದ ಡೇವಿಡ್ - Chitratara.com
Copyright 2009 chitratara.com Reproduction is forbidden unless authorized. All rights reserved.