Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿಚ್ಚ ಸುದೀಪ ಜೊತೆ ಕನ್ನಡ ಮೀಡಿಯಂ ರಾಜು
Posted date: 03 Thu, Aug 2017 05:00:41 PM
ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಚಿತ್ರದ ಮೂಲಕ ಹೆಸರಾಗಿದ್ದ ಗುರುನಂದನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಕನ್ನಡ ಮೀಡಿಯಂ ರಾಜು. ಈ ಚಿತ್ರದಲ್ಲಿ ಕಿಚ್ಚಾ ಸುದೀಪ್ ಅವರೂ ಒಂದು ಪಾತ್ರ ನಿರ್ವಹಿಸಿ ಹೊಸಬರ ತಂಡಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಆದರೆ ಮೊನ್ನೆಯಿಂದ ರಾಜ್ಯಾಧ್ಯಂತ ಸದ್ದು ಮಾಡುತ್ತಿರೋ ಐಟಿ ರೇಡ್‌ನ ಬಿಸಿ ಈ ಚಿತ್ರದ ಚಿತ್ರೀಕರಣಕ್ಕೂ ತಟ್ಟಿರೋದು ಹೊಸಾ ಸುದ್ದಿ!
 
ಕಿಚ್ಚಾ ಸುದೀಪ್ ಅವರ ಭಾಗದ ಚಿತ್ರೀಕರಣ ನಿನ್ನೆ ಈಗಲ್ಟನ್ ರೆಸಾರ್ಟಿನಲ್ಲಿ ನಿಗಧಿಯಾಗಿತ್ತು. ಇಡೀ ಚಿತ್ರತಂಡವೇ ಉತ್ಸಾಹದಿಂದ ರೆಡಿಯಾಗಿ ರೆಸಾರ್ಟಿನ ಆವರಣದಲ್ಲಿ ನೆರೆದಿತ್ತು. ಹನ್ನೊಂದು ಘಂಟೆ ಹೊತ್ತಿಗೆಲ್ಲಾ ಸುದೀಪ್ ಕೂಡಾ ಅಲ್ಲಿಗೆ ಹಾಜರಾಗಿದ್ದರು. ಆದರೆ ಆ ಹೊತ್ತಿಗೆಲ್ಲಾ ಐಟಿ ಅಧಿಕಾರಿಗಳು ಈಗಲ್ಟನ್ ರೆಸಾರ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಆದ ಕಾರಣ ಚಿತ್ರ ತಂಡ ಏನೇ ಪ್ರಯತ್ನ ಪಟ್ಟರೂ ಕೂಡಾ ಒಂದು ಘಂಟೆಗಳ ಕಾಲ ಸುದೀಪ್ ಸೇರಿದಂತೆ ಯಾರನ್ನೂ ಒಳ ಬಿಟ್ಟಿರಲಿಲ್ಲ.
 
ಕಡೆಗೆ ಚಿತ್ರ ತಂಡ ಬಿಡದಿ ಪೊಲೀಸರ ಸಹಕಾರದೊಂದಿಗೆ ಈಗಲ್ಟನ್ ರೆಸಾರ್ಟ್ ಒಳಗಿರೋ ಗಾಲ್ಫ್ ಮೈದಾನದಲ್ಲಿ ಚಿತ್ರೀಕರಣ ಆರಂಭಿಸಿತ್ತು. ಇಷ್ಟೆಲ್ಲ
 
ಆಗುವವರೆಗೂ ತಾಳ್ಮೆಯಿಂದ ಕಾದು ನಂತರ ಸರಿರಾತ್ರಿ ಒಂದು ಘಂಟೆಯವರೆಗೂ ಸುದೀಪ್ ಉತ್ಸಾಗದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. 
 
ಅಷ್ಟೆಲ್ಲ ಅಡ್ಡಿ ಆತಂಕಗಳು ಬಂದರೂ ಜೊತೆಗಿದ್ದು ತಡ ರಾತ್ರಿಯವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗಿ ಪ್ರೋತ್ಸಾಹಿಸಿದ ಸುದೀಪ್ ಅವರ ನಡೆ ಇಡೀ ಚಿತ್ರ ತಂಡದ
 
ಉತ್ಸಾಹ ಹೆಚ್ಚಿಸಿದೆ. ಈ ಬಗ್ಗೆ ಸುದೀಪ್ ಅವರೇ ಟ್ವೀಟ್ ಮಾಡಿ ಅನುಭವ ಹಂಚಿಕೊಂಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿಚ್ಚ ಸುದೀಪ ಜೊತೆ ಕನ್ನಡ ಮೀಡಿಯಂ ರಾಜು - Chitratara.com
Copyright 2009 chitratara.com Reproduction is forbidden unless authorized. All rights reserved.