Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿರುತೆರೆಯಲ್ಲಿ ನಟಸಾರ್ವಭೌಮ
Posted date: 20 Mon, May 2019 01:24:00 PM

 ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ರಚಿತಾರಾಂ ಹಾಗೂ ಅನುಪಮಾ ಪರಮೇಶ್ವರನ್  ಅಭಿನಯದ ನಟಸಾರ್ವಭೌಮ ಚಿತ್ರ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಭಿನಯ ಹಾಗೂ ಡ್ಯಾನ್ಸ್‌ಗೆ ಅಪ್ಪು ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.

ಇನ್ನು ಈ ಸಿನಿಮಾದ ಬಗ್ಗೆ ಹೇಳೋದಾದರೆ ರಾಕ್‌ಲೈನ್ ಪ್ರೊಡಕ್ಷನ್ಸ್ ಮೂಲಕ ರಾಕ್‌ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ  ತಯಾರಾಗಿರುವ  ಈ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ಒಬ್ಬ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿzರೆ. ಇಡೀ ಸಿನಿಮಾದುದ್ದಕ್ಕೂ ಸಾಧು ಕೋಕಿಲ ಹಾಗು ಚಿಕ್ಕಣ್ಣ ಅವರ ಕಾಮಿಡಿ ಝಲಕ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತ್ತು. ಇದಿಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿದ್ದು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ ಟೈನ್‌ಮೆಂಟ್ ಸಿನಿಮಾ ಆಗಿ ಮೂಡಿಬಂದಿತ್ತು.

ಪುನೀತ್ ರಾಜಕುಮಾರ್ ಹಾಗೂ ಪವನ್ ಒಡೆಯರ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ಇದಾಗಿದ್ದು, ಈ ಸಿನಿಮಾದಲ್ಲಿ  ಬಹುದೊಡ್ಡ ತಾರಾಬಳಗವೇ  ಇತ್ತು. ಅಪ್ಪು ಜೋಡಿಯಾಗಿ ಡಿಂಪಲ್ ಬ್ಯೂಟಿ ರಚಿತಾರಾಮ್ ಹಾಗೂ ಮಲೆಯಾಳಿ ಬೆಡಗಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದು, ಉಳಿದಂತೆ ರವಿಶಂಕರ್, ಹಿರಿಯ ನಟಿ ಬಿ.ಸರೋಜಾದೇವಿ, ಪ್ರಕಾಶ್ ಬೆಳವಾಡಿ, ಅವಿನಾಶ್ ಹೀಗೆ ಸಾಕಷ್ಟು  ಹಿರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಇನ್ನು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ  ದೊಡ್ಮನೆ ಹುಡುಗ  ಚಿತ್ರ ೨೧ ರೇಟಿಂಗ್ ಗಳಿಸಿದ್ದು, ಕಿರುತೆರೆಯಲ್ಲಿ ಅತಿ ಹೆಚ್ಚು ರೇಟಿಂಗ್ ಗಳಿಸಿದ ಸಿನಿಮಾ ಎನ್ನುವ ಖ್ಯಾತಿ ಪಡೆದುಕೊಂಡಿತ್ತು.  ಈಗ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರ ಅಭಿನಯದ ಯಶಸ್ವೀ ಚಿತ್ರ ನಟಸಾರ್ವಭೌಮ ಪ್ರಸಾರವಾಗುತ್ತಿದ್ದು ಈ ಸಿನಿಮಾ ಕೂಡ ಮತ್ತೊಮ್ಮೆ ರೇಟಿಂಗ್‌ನಲ್ಲಿ ದಾಖಲೆ ಬರೆಯುವ ನಿರೀಕ್ಷೆಯಿದೆ.  ಇಷ್ಟೆ ವಿಶೇಷತೆಗಳನ್ನು ಹೊಂದಿರುವ ಪವರ್‌ಫುಲ್‌ಫ್ಯಾಮಿಲಿ ಎಂಟಟೈನ್‌ಮೆಂಟ್ ಸಿನಿಮಾ ನಟ ಸಾರ್ವಭೌಮ ಇದೇ ತಿಂಗಳು ಅಂದರೆ ಮೇ ೨೬ರ ಭಾನುವಾರ ಸಂಜೆ 7ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿರುತೆರೆಯಲ್ಲಿ ನಟಸಾರ್ವಭೌಮ - Chitratara.com
Copyright 2009 chitratara.com Reproduction is forbidden unless authorized. All rights reserved.