Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಡಿನಾಡು ಸೆನ್ಸಾರ್ ಪಾರು ಜನವರಿ
Posted date: 01 Wed, Jan 2020 09:59:06 AM

ಗಡಿ ಸಮಸ್ಯೆ ಉದ್ಭವಿಸಿರುವ ಸಮಯದಲ್ಲಿ ಕನ್ನಡದಲ್ಲಿ ಗಡಿನಾಡು ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಎ ಅರ್ಹತಾ ಪತ್ರವನ್ನು ನೀಡಿ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ಈ ಗಡಿನಾಡು ಜನವರಿ 24  ಬಿಡುಗಡೆ ಆಗಲು ತಯಾರಿ ಮಾಡುತ್ತಿದೆ.

ನಾಗ್ ಹುಣಸೋಡ್ ನಿರ್ದೇಶನದ ಈ ‘ಗಡಿನಾಡು’ ಚಿತ್ರ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಗಡಿನಾಡಿನಲ್ಲಿ ಗಮನಿಸಿದ ವಿಚಾರಗಳನ್ನು ಒಳಗೊಂಡಿದೆ. ಅಥಣಿ, ಗೋಕಾಕ್, ಬೆಳಗಾವಿ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದ ನಾಯಕ ಪ್ರಭು ಸೂರ್ಯ, ಚಿತ್ರದ ಕಥಾ ನಾಯಕಿ ಸಂಚಿತ ಪಡುಕೋಣೆ.
ನಾಲ್ಕು ಹಾಡುಗಳನ್ನು
ಹಾಗೂ ಅದ್ಧೂರಿ ವೆಚ್ಚದಲ್ಲಿ ಚಿತ್ರಿಸಲಾದ ನಾಲ್ಕು ಸಾಹಸ ದೃಶ್ಯಗಳು . ಎಲ್ವಿನ್ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ ಕನ್ನಡದ ಬಗೆ ಒಂದು ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ.

ಸಂತೋಷ್ ನಾಯಕ್ ಹಾಗೂ ನಾಗ್ ಹುಣಸೋಡ್ ಗೀತ ರಚನೆ ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ವೆಂಕಿ ಸಂಕಲನ, ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನ ಮಾಡಿದ್ದಾರೆ.

ಅಕ್ಷಯ್ ಫಿಲ್ಮ್ಸ್ ನಿರ್ಮಾಣದ ‘ಗಡಿನಾಡು’ ಸಿನಿಮಾದಲ್ಲಿ ಬೆಳಗಾವಿಯವರಾದ ಹಿರಿಯ ನಟ ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತ, ಪುಷ್ಪ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಡಿನಾಡು ಸೆನ್ಸಾರ್ ಪಾರು ಜನವರಿ - Chitratara.com
Copyright 2009 chitratara.com Reproduction is forbidden unless authorized. All rights reserved.