Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಡ್ಡಪ್ಪನ್ ದುನಿಯಾ ಗೆ ಯು ಸರ್ಟಿಫಿಕೇಟ್
Posted date: 22 Thu, Mar 2018 08:06:20 AM
ಎಸ್.ಜೆ.ಎಂ. ಫಿಲಿಂ ಲಾಂಛನದಲ್ಲಿ  ಅಜಿತ್ ಗೌಡ ನಿರ್ಮಿಸುತ್ತಿರುವ ಗಡ್ಡಪ್ಪನ್ ದುನಿಯಾ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಸರ್ಟಿಫಿಕೇಟ್ ನೀಡಿದೆ. ಗ್ರಾಮೀಣ ಭಾಗದ ಒಂದು ನವಿರಾದ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ   ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಅನಿಲ್ ಹಾಗೂ ಸುನಿಲ್ ರೆಡ್ಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ರಘು, ನವೀನ್ ಗೌಡ ಛಾಯಾಗ್ರಹಣ, ಹರ್ಷ ಕಾಗೋಡು ಸಂಗೀತ ರಾಮ್ ಶೆಟ್ಟಿ ಪವನ್, ಅಯ್ಯರ್ ಸ್ವಾಮಿ ಸಂಕಲನ, ಅನಿಲ್  ವೆಂಕಟರಾಜು ಕಥೆ - ಚಿತ್ರಕಥೆ, ಸುನಿಲ್ ರೆಡ್ಡಿ, ಅನಿಲ್ - ಸಂಭಾಷಣೆ ಇರುವ ಈ ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ, ಕೆ. ತಮ್ಮೇಗೌಡ, ಪ್ರಕೃತಿ ಪ್ರಕಾಶ್, ರಘು ಆಚಾರ್, ಬಾಲಕೃಷ್ಣ ಬರಗೂರು, ನರಸಿಂಹ ಮೂರ್ತಿ, ಇಮ್ರಾನ್, ಗೋಪಾಲಪ್ಪ, ಜೀವನ್ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಡ್ಡಪ್ಪನ್ ದುನಿಯಾ ಗೆ ಯು ಸರ್ಟಿಫಿಕೇಟ್ - Chitratara.com
Copyright 2009 chitratara.com Reproduction is forbidden unless authorized. All rights reserved.