Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಡ್ಡಪ್ಪನ್ ದುನಿಯಾದಲ್ಲಿ ರೈತರಿಗೆ ಸಂದೇಶ
Posted date: 01 Thu, Mar 2018 06:28:21 PM
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕಥೆಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ.  ಈಗ ಅಂಥದ್ದೇ ಮತ್ತೊಂದು ಚಿತ್ರ ನಿರ್ಮಾಣವಾಗಿದೆ. ಕೃಷಿ ಕೆಲಸ ಮಾಡಲು ಸಾಧ್ಯವಾಗದೆ ವಲಸೆ ಹೋಗುವ ಜನರನ್ನು ಮತ್ತೆ ತಮ್ಮದೇ ಗ್ರಾಮಕ್ಕೆ ಕರೆತಂದು ಕೃಷಿಯಲ್ಲಿ ತೊಡಗಿಸುವಂತೆ ಮಾಡುವ ಕ್ರಾಂತಿಕಾರಕ ಕೆಲಸವನ್ನು ಗಡ್ಡಪ್ಪ ಮಾಡುತ್ತಾರೆ. ಈ ಕಥೆಯಲ್ಲಿ ಒಂದು ನವಿರಾದ ಪ್ರೇಮಕಥೆಯು ಇದೆ. ಗಡ್ಡಪ್ಪ - ಸೆಂಚುರಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಡಪ್ಪನ್ ದುನಿಯಾ ಎಂಬ ಈ ಹೆಸರಿನ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಚಿತ್ರದ ಪ್ರಥಮ ಪ್ರತಿ ಹೊರಬಂದಿದೆ. ಮುಂದಿನ ತಿಂಗಳಲ್ಲಿ ತೆರೆ ಕಾಣಲಿದೆ. ಅನಿಲ್, ಸುನಿಲ್ ರೆಡ್ಡಿ ಜೊತೆಗೂಡಿ ನಿರ್ದೇಶಿಸಿದ್ದು ಮಂಡ್ಯ, ಪಾಂಡವಪುರ, ಮೇಲುಕೋಟೆ, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  
 
ಎಸ್.ಜೆ.ಎಂ.ಫಿಲಂಸ್ ಲಾಂಛನದಲ್ಲಿ ಅಜಿತ್‌ಗೌಡ ಕುಪ್ಪಂಡಳ್ಳಿ ನಿರ್ಮಿಸಿರುವ ಈ ಚಿತ್ರಕ್ಕೆ ಹಷ್ ಕಾಗೋಡ್ ಸಂಗೀತ, ರಘು ಮತ್ತು ನವೀನಗೌಡ ಛಾಯಾಗ್ರಹಣ, ರಾಮಶೆಟ್ಟಿ ಪವನ್ ಅಯ್ಯರ್‌ಸ್ವಾಮಿ ಸಂಕಲನ, ಅನಿಲ್ ವೆಂಕಟರಾಜ್ ಕಥೆ, ಚಿತ್ರಕಥೆ ಸುನಿಲ್ ರೆಡ್ಡಿ ಅನಿಲ್ ಸಂಭಾಷಣೆ ಇದೆ.  ಗಡ್ಡಪ್ಪ, ಸೆಂಚುರಿಗೌಡ, ಕೆ. ತಮ್ಮೇಗೌಡ, ಸಿ.ಮಧು ರಘು ಆಚಾರ್ ಪ್ರಕೃತಿ ಪ್ರಕಾಶ್, ಬಾಲಕೃಷ್ಣ ಬರಗೂರ್, ನರಸಿಂಹಮೂರ್ತಿ ಇಮ್ರಾನ್, ಶ್ರವನ್, ಗಿತ್ತಪ್ಪ ಗೋಪಾಲಪ್ಪ ಜೀವನ್ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಡ್ಡಪ್ಪನ್ ದುನಿಯಾದಲ್ಲಿ ರೈತರಿಗೆ ಸಂದೇಶ - Chitratara.com
Copyright 2009 chitratara.com Reproduction is forbidden unless authorized. All rights reserved.