Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಣೇಶನ ಸನ್ನಿಧಿಯಲ್ಲಿ ಕೃಷ್ಣ ಗಾರ್ಮೆಂಟ್ಸ್ ಆರಂಭ
Posted date: 22 Thu, Mar 2018 08:40:57 AM
ಕೆ.ಎಸ್.ರಕ್ಷಿತ್ ಎಂಟರ್‌ಟೈನ್‌ಮೆಂಟ್ ಹಾಗೂ ಸುಮುಖ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ಗಣೇಶನ ದೇವಸ್ಥಾನದಲ್ಲಿ ಮಾರ್ಚ್ ೧೯ರ ಸೋಮವಾರ ನೆರವೇರಿತು. ನಾಯಕ ಹಾಗೂ ನಾಯಕಿ ದೇವರಿಗೆ ನಮಿಸುವ ಮೊದಲ ಸನ್ನಿವೇಶಕ್ಕೆ ವಿಜಯಕುಮಾರ್ ಆರಂಭ ಫಲಕ ತೋರಿದರು. ಕೆ.ಶ್ರೀನಿವಾಸಮೂರ್ತಿ ಹಾಗೂ ಕೆ.ಎಸ್.ರಶ್ಮಿ ಕ್ಯಾಮೆರಾ ಚಾಲನೆ ಮಾಡಿದರು. ಇದೇ ತಿಂಗಳ ೨೧ರಿಂದ ಶ್ರವಣಬೆಳಗೊಳದಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ.  
ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರು ‘ಮನೆಮಗಳು‘, ‘ಯಶೋಧರ‘ ಸೇರಿದಂತೆ ಹತ್ತು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ ಹಾಗೂ ೨೦೧೫-೧೬ನೆ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದ ‘ಹೆಮ್ಮರ‘ ಚಿತ್ರವನ್ನು ಸಿದ್ದು ಅವರೆ ನಿರ್ದೇಶಿಸಿದ್ದಾರೆ. 
‘ಶ್ರೀಮಾನ್ ಶ್ರೀಮತಿ‘ ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ‘ಬ್ರಹ್ಮಾಸ್ತ್ರ‘ ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಹೆಚ್.ಎಂ.ಟಿ ವಿಜಯ್, ರಾಮರಾವ್, ಪ್ರಮಿಳಾ ಸುಬ್ರಮಣ್ಯ, ವರ್ಧನ್ ತೀರ್ಥಹಳ್ಳಿ, ಕಿರಣ್ ಹೊನ್ನಾವರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 
 ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಬೆಂಗಳೂರು, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಹಾಸನ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಣೇಶನ ಸನ್ನಿಧಿಯಲ್ಲಿ ಕೃಷ್ಣ ಗಾರ್ಮೆಂಟ್ಸ್ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.