Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಿರ್‌ಗಿಟ್ಲೆ ಹೊಸ ಅನುಭವ ನಾಳೆಯಿಂದ ತೆರೆಗೆ
Posted date: 14 Thu, Mar 2019 09:44:51 AM

ವೀರಾಂಜನೇಯ ಎಂಟೆರ್ಟೈನೆರ್ಸ್ ಅಡಿಯಲ್ಲಿ ತಯಾರಾಗಿ ಒಂದು ಹೊಸ ಅನುಭವ ಪ್ರೇಕ್ಷಕನಿಗೆ ನೀಡಲು ಬರುತ್ತಿದೆ ನಾಳೆಯಿಂದ  ತೆರೆಗೆ ಬರುತ್ತಿರುವ ಸಿನಿಮಾ ‘ಗಿರ್‌ಗಿಟ್ಲೆ’. ಈ ಚಿತ್ರವನ್ನು ಗಿರೀಶ್ ಜೊತೆ ತಿಮ್ಮರಾಜು ಹಾಗೂ ವೆಂಕಟೇಶ್ ಸೇರಿಕೊಂಡು ನಿರ್ಮಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನಿರ್ದೇಶಕ ರವಿ ಕಿರಣ್ ಈ ಚಿತ್ರಕ್ಕೆ ನಿಜ ಜೀವನದಲ್ಲಿ ಪ್ರಯಾಣದಲ್ಲಿ ಇದ್ದಾಗ ಪ್ರತ್ಯಕ್ಷವಾಗಿ ಕೇಳಿದ ವಿಚಾರದ ಬಗ್ಗೆ ಸಿನಿಮಾ ಮಾಡಿದ್ದಾರೆ. ಇದೊಂದು ದೊಡ್ಡ ತಾರಗಣದ ಸಿನಿಮಾ. ಜೀವನದ ಅನೇಕ ಮಜಲುಗಳನ್ನು ಹೇಳುವಂತಹ ಸಿನಿಮಾ.

ಈ ಚಿತ್ರದಲ್ಲಿ ರಂಗಾಯಣ ರಘು ಅವರದು ಪ್ರಮುಖ ಪಾತ್ರ ಅನೇಕ ವಿಚಾರಗಳು ಅವರಿಂದ ಪ್ರಸ್ತಾಪ ಆಗುತ್ತದೆ. ಪ್ರದೀಪ್, ಗುರು, ಚಂದ್ರು, ವೈಷ್ಣವಿ (ಅಗ್ನಿ ಸಾಕ್ಷಿ ನಟಿ) ಅದ್ವಿತೀ, ಕೋಟೆ ಪ್ರಭಾಕರ್, ಸತ್ಯಪ್ರಕಾಶ್, ಪೆಟ್ರೋಲ್ ಪ್ರಸನ್ನ, ಶ್ರೀನಗರ ಕಿಟ್ಟಿ (ಒಂದು ಹಾಡು ಒಂದು ಸನ್ನಿವೇಶದಲ್ಲಿ) ಓಂ ಪ್ರಕಾಷ್ ರಾವ್, ರಾಕ್ಲೈನ್ ಸುಧಾಕರ್, ಮಿತ್ರ, ಲಯೆನ್ದ್ರ, ಬಂಕ್ ಜನಾರ್ಧನ್, ಗಾಂಧಿ, ಕುರಿ ಸುನಿಲ್, ಎ ಆರ್ ಬಾಬು, ಉದಯ್, ರಮೇಶ್ ಪಂಡಿತ್, ನೀನಾಸಮ್ ಅಶ್ವಥ್, ಮುನಿ, ಪ್ರಿಯಾಂಕ,

ರವಿ ತೇಜ, ಮೋಹನ್ ಜುನೇಜ, ಮೈಕಲ್ ಮಧು ಹಾಗೂ ಇತರರು ತಾರಗಣದಲ್ಲಿದ್ದಾರೆ.

ರುಣ್ ಸುರೇಶ್ ಎಸ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಲಿಯೊ ಪೀಟರ್ಸ್ ಸಂಗೀತ, ಸತೀಶ್ ಬಾಬು ಹಿನ್ನಲೆ ಸಂಗೀತ, ವಿನೋದ್ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಿರ್‌ಗಿಟ್ಲೆ ಹೊಸ ಅನುಭವ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.