Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋಕರ್ಣದಲ್ಲಿ ಬಟರ್‌ಫ್ಲೈ
Posted date: 28 Thu, Sep 2017 09:11:06 AM
ರಮೇಶ್ ಅರವಿಂದ್ ಸುಂದರಾಂಗ ಜಾಣ ಚಿತ್ರದ ಯಶಸ್ಸಿನ ನಂತರ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ಒಂದು ಚಿತ್ರ ಆರಂಭಿಸಿದ್ದರು. ಹಿಂದಿಯಲ್ಲಿ ಸೂಪರ್ ಹಿಟ್ ಅನ್ನಿಸಿಕೊಂಡಿರೋ ಕಂಗನಾ ರಣೌತ್ ಅಭಿನಯದ ಕ್ವೀನ್ ಚಿತ್ರವನ್ನು ಬಟರ್‌ಫ್ಲೈ ಹೆಸರಲ್ಲಿ ಕನ್ನಡದಲ್ಲಿ ಶುರು ಮಾಡಿದ್ದ ರಮೇಶ್ ಆ ಸಂದರ್ಭದಲ್ಲಿಯೇ ಈ ಚಿತ್ರ ತಮಿಳಿನಲ್ಲಿಯೂ ಮೂಡಿ ಬರಲಿರೋ ಸೂಚನೆ ಕೊಟ್ಟಿದ್ದರು.
 
ಇದೀಗ ರಮೇಶ್ ಅರವಿಂದ್ ನಿರ್ದೆಶನದಲ್ಲಿಯೇ ಕ್ವೀನ್ ಚಿತ್ರದ ರೀಮೇಕ್ ‘ಪ್ಯಾರಿಸ್ ಪ್ಯಾರಿಸ್ ಹೆಸರಲ್ಲಿ ತಮಿಳಿನಲ್ಲಿ ಆರಂಭವಾಗಿದೆ. ಕನ್ನಡದ ಬಟರ್‌ಫ್ಲೈನಲ್ಲಿ ಪಾರೂಲ್ ಯಾದವ್ ನಾಯಕಿಯಾಗಿದ್ದರೆ, ತಮಿಳಿನ ಪ್ಯಾರಿಸ್ ಪ್ಯಾರಿಸ್ ಚಿತ್ರಕ್ಕೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ ಈ ಚಿತ್ರದ ಚಿತ್ರೀಕರಣಕ್ಕಾಗಿ ಪ್ಯಾರಿಸ್ ಸೇರಿದಂತೆ ನಾನ ದೇಶಗಳಿಗೆ ತೆರಳಲು ರಮೇಶ್ ಅರವಿಂದ್ ಸಜ್ಜಾಗಿದ್ದಾರೆ.
 
ಕನ್ನಡದ ಬಟರ್‌ಫ್ಲೈ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಚಿತ್ರೀಕರಣ ನಡೆದಿದೆ. ಇನ್ನು ಮುಂದೆ ಕನ್ನಡ ಹಾಗೂ ತಮಿಳು ಚಿತ್ರಗಳೆರಡರ ಚಿತ್ರೀಕರಣವೂ ಏಕಕಾಲದಲ್ಲಿ ನಡೆಯಲಿದೆಯಂತೆ. ಅಕ್ಟೋಬರ್ ೪ನೇ ತಾರೀಕಿನಿಂದ ಗೋಕರ್ಣದಿಂದ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿ ನಂತರ ಪ್ಯಾರಿಸ್ ಸೇರಿದಂತೆ ವಿದೇಶಗಳ ನಾನಾ ಭಾಗಗಳಿಗೆ ತೆರಳಲು ರಮೇಶ್ ಅರವಿಂದ್ ಯೋಜನೆ ಹಾಕಿಕೊಂಡಿದ್ದಾರಂತೆ. ಕನ್ನಡ ಮತ್ತು ತಮಿಳಿನಲ್ಲಿಯೂ ಕನ್ನಡದ ನಟ ಶಶಿ ವರುಣ್ ನಾಯಕನಾಗಿ ಅಭಿನಯಿಸುತ್ತಾರೆ. ಜೊತೆಗೆ ನಿರ್ದೇಶನದ ಜೊತೆಗೇ ರಮೇಶ್ ಅರವಿಂದ್ ಕೂಡಾ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.
 
ಮೇಲು ನೋಟಕ್ಕೆ ಇವೆರಡೂ ಚಿತ್ರಗಳು ರೀಮೇಕ್ ಅನ್ನಿಸಬಹುದು. ಆದರೆ ರಮೇಶ್ ಅರವಿಂದ್ ಮೂಲ ಚಿತ್ರದ ವಸ್ತುವನ್ನಷ್ಟೇ ಎತ್ತಿಕೊಂಡು ನಮ್ಮ ಭಾವನೆಗಳಿಗೆ ತಕ್ಕುದಾಗಿ ದೃಷ್ಯ ಕಟ್ಟುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಕಾರಣದಿಂದಲೇ ರಮೇಶ್ ನಿರ್ದೇಶನದ ಈ ಎರಡೂ ಭಾಷೆಯ ಚಿತ್ರಗಳು ಕುತೂಹಲ ಹುಟ್ಟಿಸಿವೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಕರ್ಣದಲ್ಲಿ ಬಟರ್‌ಫ್ಲೈ - Chitratara.com
Copyright 2009 chitratara.com Reproduction is forbidden unless authorized. All rights reserved.