Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋದ್ರ - ರಕ್ಷ ವಸಿಷ್ಠ ಜೋಡಿ ಆಯ್ಕೆ
Posted date: 20 Wed, Dec 2017 10:36:16 AM
ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ‘ಗೋದ್ರ’ ಚಿತ್ರ ಎರಡನೇ ಹಂತದ ಚಿತ್ರೀಕರಣ ಮಂಗಳೂರು ಹಾಗೂ ಕಾಸರಗೋಡಿನ ಕಡೆಗೆ ಹೊರಟು ನಿಂತಿದೆ. ಎರಡನೇ ಹಂತದ ಚಿತ್ರೀಕರಣ ಇದೇ ತಿಂಗಳ ೨೦ ರಿಂದ ಆರಂಭವಾಗಿದೆ. ಗೋದ್ರ ಚಿತ್ರದ ಶೀರ್ಷಿಕೆಗೆ ‘ಎಂದೂ ಮುಗಿಯದ ಯುದ್ದ’ ಎಂದು ಹೇಳಲಾಗಿದೆ.
ಈ ಹಂತದಲ್ಲಿ ‘ಗೋದ್ರ’ ಚಿತ್ರದ ನಟ ವಸಿಷ್ಠ ಎನ್ ಸಿಂಹ ಅವರಿಗೆ ಬೆಂಗಳೂರಿನ ಚೆಲುವೆ ರಕ್ಷ ಸೋಮಶೇಖರ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಚಿತ್ರದ ಕಥಾ ನಾಯಕ ನಿನಾಸಮ್ ಸತೀಶ್ ಅವರಿಗೆ ನಾಯಕಿ ಆಗಿ ಶ್ರದ್ಧಾ ಶ್ರೀನಾಥ್ ಅಭಿನಯ ಮಾಡುತ್ತಿದ್ದಾರೆ.
‘ಗೋದ್ರ’ ಕನ್ನಡ ಸಿನಿಮಾ ೨೦೦೨ ರಲ್ಲಿ ನಡೆದ ಗೋದ್ರ ಹತ್ಯೆಗೆ ಸಂಬಂದ ಪಟ್ಟ ಸಿನಿಮಾ ಅಲ್ಲ ಎಂದು ಚೊಚ್ಚಲ ನಿರ್ದೇಶಕ ಕೆ ಎಸ್ ನಂದೀಶ್ ಅವರು ತಿಳಿಸುತ್ತಾರೆ. ನಿರ್ದೇಶಕರೆ ಕಥೆ ಚಿತ್ರಕಥೆ ಸಹ ರಚಿಸಿದ್ದಾರೆ. ಇವರು ಜೇಕಬ್ ವರ್ಗೀಸ್ ಜೊತೆ ಸಹಾಯಕರಾಗಿ ದುಡಿದವರು.
ಇಲ್ಲೊಂದು ಪ್ರೇಮ ಕತೆಯಿದೆ. ಸುಬ್ರಮಣ್ಯ ಇಂದ ಹೊರಟು ಉತ್ತರ ಭಾರತದ ಕಡೆ ಚಿತ್ರಕಥೆ ಸಾಗುತ್ತದೆ. ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ ಎಂದು ಅವರು ನಿರ್ದೇಶಕರು ಬಣ್ಣಿಸುತ್ತಾರೆ. ಕೆಲವು ಭಾಗದ ಚಿತ್ರೀಕರಣ ಜಾರ್ಖಂಡ್ ಸುತ್ತ ಮುತ್ತಲು ೧೫ ಹೊಸ ಮುಖಗಳೊಂದಿಗೆ ಚಿತ್ರೀಕರಣ ಮಾಡಲಾಗುವುದು.
ಸಮೂಹ ಟಾಕೀಸ್ ಅಡಿಯಲ್ಲಿ ಜೇಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ ಜಂಟಿ ನಿರ್ಮಾಣದ ಚಿತ್ರ. ಜಬೇಜ್ ಕೆ ಗಣೇಶ್ ಈ ಚಿತ್ರದ ಛಾಯಾಗ್ರಾಹಕರು.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋದ್ರ - ರಕ್ಷ ವಸಿಷ್ಠ ಜೋಡಿ ಆಯ್ಕೆ - Chitratara.com
Copyright 2009 chitratara.com Reproduction is forbidden unless authorized. All rights reserved.