ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರ ಗೋಸಿ ಗ್ಯಾಂಗ್. ಕೆ.ಶಿವಕುಮಾರ್ ಕಥೆ ಬರೆದು ನಿರ್ಮಾಣ ಮಾಡುತ್ತಿರುವವರು ಈ ಚಿತ್ರಕ್ಕೆ ರಾಜರಾಜೇಶ್ವರಿನಗರ ಹಾಗೂ ಬಿಡದಿಯಲ್ಲಿ ನಾಯಕ ನಾಯಕಿಯರೊಂದಿಗೆ ಕಿಲ್ಲವೆಂಕಟೇಶ್, ಬ್ಯಾಂಕ್ ಜನಾರ್ಧನ್ ಮುಂತಾದ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳು ಚಿತ್ರೀಕರಣವಾದವು.
ಈ ಚಿತ್ರದ ನಿರ್ದೇಶಕ ರಾಜು ದೇವಸಂದ್ರ, ಹಾಲೇಶ್ ಛಾಯಾಗ್ರಹಣ, ಆರವ್ ರುಶಿಕ್ ಸಂಗೀತ ನಿದೇಶನ , ಪ್ರಭು ಕಲೆ, ಕುಮಾರ್ ಕೋಟೆಕೊಪ್ಪ ಸಂಕಲನ, ರಾಜು ದೇವಸಂದ್ರ ಸಂಭಾಷಣೆ, ದಯಾನಂದಸ್ವಾಮಿ, ಸಾಹಿತ್ಯ - ಯೋಗರಾಜಭಟ್, ಶಶಿಕರ ಪಾತೂರು, ಹರಿಮಾವಳ್ಳಿ, ಅಪ್ಪವರ್ಧನ್ ಅವರದ್ದು. ಮಾಸ್ ಮಾದ ಸಾಹಸ, ವೈಟ್ & ವೈಟ್ ರಾಮಣ್ಣ ಅವರ ನಿರ್ವಹಣೆ ಈ ಚಿತ್ರಕ್ಕಿದೆ.
ಜಗ್ಗೇಶ್ ರವರ ಕಿರಿಯ ಪುತ್ರ ಯತಿರಾಜ್ ಜಗ್ಗೇಶ್, ಅಜಯ್ ಕಾರ್ತಿಕ್, ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕ, ಅನುಷ, ಸೋನು ಪಾಟೀಲ್, ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದರ್, ಬ್ಯಾಂಕ್ ಜನಾರ್ಧನ್, ಮೈಕೆಲ್ ಮಧು, ಸುಚಿತ್ರ, ಕಾವ್ಯ ಪ್ರಕಾಶ್, ಅನ್ನಪೂರ್ಣ, ಶಿವು ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.