Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನವರಿ ಆಡಿಯೋ ಫ಼ೆಭ್ರವರಿಯಲ್ಲಿ ಡಿಂಗ ಬಿಡುಗಡೆ
Posted date: 25 Wed, Dec 2019 01:27:15 PM

ಶ್ರೀಮಾಯಕಾರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಮುಗೂರು ಮಧು ದೀಕ್ಷಿತ್ ಅವರು ನಿರ್ಮಿಸಿರುವ ‘ಡಿಂಗ‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಫ಼ೆಬ್ರವರಿ ಮೊದಲವಾರದಲ್ಲಿ ಬಿಡುಗಡೆಯಾಗಲಿದೆ. ಜನವರಿ 4 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ.

ಅಭಿಷೇಕ್ ಜೈನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪೂರ್ತಿ ಚಿತ್ರೀಕರಣವನ್ನು ಐಫ಼ೋನ್‌ನಲ್ಲಿ ಸೆರೆ ಹಿಡಿಯಲಾಗಿದೆ. ಐ ಫ಼ೋನ್‌ಗೆ ಹೊಂದುವಂತಹ ವಿಶೇಷ ಲೆನ್ಸ್‌ಗಳನ್ನು ಯು.ಎಸ್ ನಿಂದ ತರಿಸಿ ಚಿತ್ರೀಕರಣ ಮಾಡಲಾಗಿದೆ. ಇದು ಇಡೀ ಏಷ್ಯಾದಲ್ಲೇ ಪ್ರಥಮ ಪ್ರಯತ್ನ ಎನ್ನುತ್ತಾರೆ ನಿರ್ದೇಶಕರು. ಒಂದು ಕಮರ್ಷಿಯಲ್ ಚಿತ್ರ ಯಾವ ರೀತಿ ಬರುತ್ತದೊ, ಅದೇ ರೀತಿ ಮೂಡಿಬಂದಿದೆ ‘ಡಿಂಗ‘.

ಸುದ್ದೊ ರಾಯ್ ಸಂಗೀತ ನಿರ್ದೇಶನ, ಮಂಜುನಾಥ್ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ. ಆರವ್ ಗೌಡ, ಅಭಿಷೇಕ್ ಜೈನ್, ಅನೂಶ, ನಾಗೇಂದ್ರ ಶಾ, ರಘು ರಮಣಕೊಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನವರಿ ಆಡಿಯೋ ಫ಼ೆಭ್ರವರಿಯಲ್ಲಿ ಡಿಂಗ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.