ಬಾಲನಟನಾಗಿಕಿರುತೆರೆಯಲ್ಲಿ ನಟನೆಯಜರ್ನಿ ಆರಂಭಿಸಿದ್ದ ನಟ ಶ್ರೀನಗರ ಕಿಟ್ಟಿ ಮತ್ತೆಕಿರುತೆರೆಗೆಆಗಮಿಸುತ್ತಿದ್ದಾರೆ. ಕನ್ನಡದ ಪ್ರತಿಷ್ಠಿತ ಮನರಂಜನಾ ವಾಹಿನಿ ಉದಯಟಿವಿಯಲ್ಲಿ ಪ್ರಸಾರವಾಗುವಜೀವನದಿ ಧಾರಾವಾಹಿಯಲ್ಲಿಅತಿಥಿಯಾಗಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರದಿಂದ ಶುಕ್ರವಾರರಾತ್ರಿ ೯ ಗಂಟೆಗೆಕಿಟ್ಟಿಅಭಿನಯದ ಸಂಚಿಕೆ ಪ್ರಸಾರವಾಗಲಿದೆ.
ಸರಸ್ವತಿ ನಟರಾಜನ್‌ಅವರಕಾದಂಬರಿ ಆಧರಿಸಿ ಜೀವನದಿ ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ ೫೬೦ ಸಂಚಿಕೆಗಳು ಪ್ರಸಾರವಾಗಿಕನ್ನಡದಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಈಗ ವಿಶೇಷ ಪಾತ್ರದಲ್ಲಿಕನ್ನಡಚಿತ್ರರಂಗದ ಹೆಸರಾಂತ ನಟ ಶ್ರೀನಗರ ಕಿಟ್ಟಿಯವರನ್ನುಕರೆಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿದೆಧಾರಾವಾಹಿ ತಂಡ.
೨೦೦೩ ನೇ ಸಾಲಿನಲ್ಲಿಚಂದ್ರಚಕೋರಿಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶ್ರೀನಗರ ಕಿಟ್ಟಿಗೌಡ್ರು, ಲವ್ಸ್ಟೋರಿ, ಆದಿ, ಅಯ್ಯ ಮತ್ತು ವಿಷ್ಣು ಸೇನೆ ಚಿತ್ರಗಳಲ್ಲಿ ನಟಿಸಿ ಹೆಸರು ಸಂಪಾದಿಸಿದ್ದರು. ಬಳಿಕ ಗಿರಿ ಮತ್ತುಇಂತಿ ನಿನ್ನ ಪ್ರೀತಿಯಚಿತ್ರದಲ್ಲಿ ನಾಯಕನಾಗಿ ಭಡ್ತಿ ಪಡೆದರು. ಬಳಿಕ ಒಲವೇ ಜೀವನ ಲೆಕ್ಕಾಚಾರ, ಜನುಮದ ಗೆಳತಿ, ಮತ್ತೆ ಮುಂಗಾರು, ಸವಾರಿ, ಮಳೆ ಬರಲಿ ಮಂಜೂಇರಲಿ, ಸ್ವಯಂವರ, ಸಂಜು ವೆಡ್ಸ್‌ಗೀತಾ ಮತ್ತು ಹುಡುಗರುಚಿತ್ರದಲ್ಲಿ ನಟಿಸುವ ಮೂಲಕ ಯಶಸ್ಸಿನ ಉತ್ತುಂಗವೇರಿದವರು ಶ್ರೀನಗರ ಕಿಟ್ಟಿ. ಬಹುಪರಾಕ್‌ಚಿತ್ರದಲ್ಲಿತ್ರಿಪಾತ್ರದಲ್ಲಿ ನಟಿಸಿ ವೀಕ್ಷಕರಮನಸೆಳೆದದ್ದು ಇವರ ಹೆಚ್ಚುಗಾರಿಕೆ. ಈ ಸಾಧಕ ನಟ ನಮ್ಮಧಾರಾವಾಹಿಯಲ್ಲಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿಎನ್ನುತ್ತಾರೆಜೀವನದಿ ಧಾರಾವಾಹಿಯ ನಿರ್ದೇಶಕ ಸೈಯದ್‌ಆಶ್ರಪ್.
ಹೆಣ್ಣೊಬ್ಬಳು ಮನಸು ಮಾಡಿದರೆತನಗೆಎದುರಾಗುವ ಕಷ್ಟಗಳನ್ನು ಹೇಗೆಲ್ಲ ಹಿಮ್ಮೆಟ್ಟಿಸಬಹುದು? ಕುಗ್ಗದೇಜಗ್ಗದೇ ಮುನ್ನುಗ್ಗಬಹುದುಎಂಬುದನ್ನು ವಕೀಲೆ ಜ್ಯೋತಿ ಪಾತ್ರದ ಮೂಲಕ ನವಿರಾಗಿಜೀವನದಿ ಧಾರಾವಾಹಿ ನಿರೂಪಿಸುತ್ತಿದೆ. ವಿನಯ್, ಅರ್ಚನಾ, ನದಾಪ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಮೀಡಿಯಾಹೌಸ್ ಮತ್ತು ಸಂಗಮ ಫಿಲ್ಮ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ.
ವೀಕ್ಷಕರ ನೆಚ್ಚಿನಧಾರಾವಾಹಿ ಜುಲೈ ೨೯ ರಿಂದ ಆ. ೨ ರ ವರೆಗೆಒಂದು ತಾಸಿನ ಅವಧಿಯ ವಿಶೇಷ ಸಂಚಿಕೆ ಪ್ರಸಾರವಾಗಿದೆ. ಜೀವನದಿ ಯಕಥೆ ಮಹತ್ವದತಿರುವಿನ ಹಂತತಲುಪಿದ್ದು ವೀಕ್ಷಕರಿಗೆ ಹೆಚ್ಚಿನರಂಜನೆ ನೀಡುವಉದ್ದೇಶದಿಂದ ವಾರವಿಡೀ ಮಹಾಸಂಚಿಕೆ ಪ್ರಸಾರ ಮಾಡಲಾಗುತ್ತಿದೆ.
ಜೀವನದಿ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ ೯ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.