Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೂನ್ ತಿಂಗಳಲ್ಲಿ ಆರೋಹಣ
Posted date: 24 Thu, May 2018 09:15:44 AM
ಮಲ್ಲಿಕಾರ್ಜುನ ಪ್ರೊಡಕ್ಷನ್ ಲಾಂಛನದಲ್ಲಿ ಸುಶೀಲ್‌ಕುಮಾರ್ ನಿರ್ಮಿಸುತ್ತಿರುವ ಆರೋಹಣ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಹಳ್ಳಿಯಲ್ಲಿ ತಂದೆ-ಮಗನ ಮದ್ಯೆ ನಡೆಯುವ ಹಳ್ಳಿ ಪಂಚಾಯಿತಿ ರಾಜಕೀಯದೊಂದಿಗೆ ಇದೊಂದು ತ್ರಿಕೋನ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಶ್ರೀಧರ್ ಶೆಟ್ಟಿಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕೆ.ವೈ. ಶಿವಪುತ್ರ ಛಾಯಾಗ್ರಹಣ, ಉತ್ತಮ್‌ರಾಜ್ ಆರ್.ಆರ್. ಹಾಗೂ ರಾಹುಲ್ ರಾಘವನ್ ಸಂಗೀತ, ಕೆ.ಕಲ್ಯಾಣ್ ಹಾಗೂ ಶ್ರೀಧರ್ ಶೆಟ್ಟಿ ಸಾಹಿತ್ಯ, ಜಗ್ಗು ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸ, ದುರ್ಗ ಪಿ.ಎಸ್ ಸಂಕಲನವಿದೆ. ಸುಶೀಲ್‌ಕುಮಾರ್,  ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ದೀಕ್ಷ, ಮೈತ್ರಿ, ರವಿ, ಮಣಿ, ಆಶಾ, ಜೂ.ಸಾಯಿಬಾಬಾ, ಇನ್ನು ಮುಂತಾದವರ ತಾರಾಬಳಗವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೂನ್ ತಿಂಗಳಲ್ಲಿ ಆರೋಹಣ - Chitratara.com
Copyright 2009 chitratara.com Reproduction is forbidden unless authorized. All rights reserved.