Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೂನ್‌ನಲ್ಲಿ ನನ್ನ ಪ್ರಕಾರ ಬಿಡುಗಡೆ ಸದ್ಯದಲ್ಲೇ ಅಡಿಯೋ ರಿಲೀಸ್
Posted date: 11 Thu, Apr 2019 08:55:45 AM

ಜಿ.ವಿ.ಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡಿರುವ ‘ನನ್ನ ಪ್ರಕಾರ  ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಜೀ ಮ್ಯೂಸಿಕ್ ಅವರು ಈ ಚಿತ್ರದ ಹಾಡುಗಳ ಸೀಡಿಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ  ಹುಲಿರಾಯ ಖ್ಯಾತಿಯ ಅರ್ಜುನ್‌ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನ್ವರ್ಷಿ, ವಿನಯ್‌ಬಾಲಾಜಿ, ಅವರ ಸಂಭಾಷಣೆ ಬರೆದಿದ್ದಾರೆ.  ಮನೋಹರ್‌ಜೋಷಿ ಛಾಯಾಗ್ರಹಣ,  ಸತೀಶ್ ಸಂಕಲನ ಡಿಫ಼ರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ - ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವಿನೋದ್ ರಾವ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು  ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಬರೆದಿದ್ದಾರೆ.

ಕಿಶೋರ್, ಪ್ರಿಯಾಮಣಿ, ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೂನ್‌ನಲ್ಲಿ ನನ್ನ ಪ್ರಕಾರ ಬಿಡುಗಡೆ ಸದ್ಯದಲ್ಲೇ ಅಡಿಯೋ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.